alex Certify
ಕನ್ನಡ ದುನಿಯಾ       Mobile App
       

Kannada Duniya

ಶೌಚಾಲಯಕ್ಕೆ ಹೋದ ವ್ಯಕ್ತಿಯ ಖಾಸಗಿ ಅಂಗದ ಮೇಲೆ ದಾಳಿ ಮಾಡ್ತು ಹಾವು..!

pythone

ಥೈಲ್ಯಾಂಡ್ ನಲ್ಲಿ ಭಯಗೊಳಿಸುವ ಘಟನೆಯೊಂದು ನಡೆದಿದೆ. ಹಾವೊಂದು ವ್ಯಕ್ತಿಯ ಖಾಸಗಿ ಜಾಗಕ್ಕೆ ಕಚ್ಚಿದೆ. ಶೌಚಾಲಯಕ್ಕೆ ಹೋದಾಗ ಈ ಘಟನೆ ನಡೆದಿದೆ.

ವ್ಯಕ್ತಿಯೊಬ್ಬ ಎಂದಿನಂತೆ ಬೆಳಿಗ್ಗೆ ಶೌಚಾಲಯಕ್ಕೆ ಹೋಗಿದ್ದಾನೆ. ಆಗ ಆತನ ಖಾಸಗಿ ಅಂಗವನ್ನು ಏನೋ ಕಚ್ಚಿದ ಅನುಭವವಾಗಿದೆ. ತಕ್ಷಣ ಕೈ ಹಾಕಿದ್ದಾನೆ. ಆಗ ಆತನ ಕೈಗೆ ಹಾವು ಸಿಕ್ಕಿದ. ಅದು ಖಾಸಗಿ ಅಂಗವನ್ನು ಸರಿಯಾಗಿ ಕಚ್ಚಿದ್ದರಿಂದ ರಕ್ತ ಸೋರುತ್ತಿತ್ತು. ಹಾವನ್ನು ನೋಡಿ ಹೆದರಿದ ವ್ಯಕ್ತಿ, ಹಾವಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. 38 ವರ್ಷದ ವ್ಯಕ್ತಿ ತಕ್ಷಣ ಹೆಂಡತಿಯನ್ನು ಕೂಗಿದ್ದಾನೆ.

ಅಲ್ಲಿಗೆ ಬಂದ ಪತ್ನಿ, ಪತಿಗೆ ಸಹಾಯ ಮಾಡಿದ್ದಾಳೆ. ಇಬ್ಬರೂ ಸೇರಿ ಹಾವಿನಿಂದ ತಪ್ಪಿಸಿಕೊಂಡು ಬಂದಿದ್ದಲ್ಲದೆ, ಹಾವನ್ನು ಶೌಚಾಲಯದಲ್ಲಿ ಕೂಡಿ ಹಾಕಲು ಯಶಸ್ವಿಯಾಗಿದ್ದಾರೆ. ತಕ್ಷಣ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹಾವು ಕಚ್ಚಿದ್ದರಿಂದ ತುಂಬಾ ರಕ್ತ ಹೋಗಿದೆ. ಚಿಕಿತ್ಸೆಯಿಂದ ವ್ಯಕ್ತಿ ಚೇತರಿಸಿಕೊಂಡಿದ್ದಾನೆ.

ವಿಷಕಾರಿ ಹಾವು 4 ಮೀಟರ್ ಉದ್ದವಿತ್ತಂತೆ. ಚಿಕಿತ್ಸೆ ನಂತ್ರ ಹಾವು ತಜ್ಞರಿಗೆ ಕರೆ ಮಾಡಲಾಗಿದೆ. ಅಲ್ಲಿಗೆ ಬಂದ ತಜ್ಞರು ಶೌಚಾಲಯದಿಂದ ಹಾವನ್ನು ತೆಗೆದಿದ್ದಾರೆ. ಹಾವು ಅಲ್ಲಿಯವರೆಗೂ ಜೀವಂತವಾಗಿತ್ತೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...