alex Certify
ಕನ್ನಡ ದುನಿಯಾ       Mobile App
       

Kannada Duniya

ಟಾಯ್ಲೆಟ್ ನಲ್ಲಿ ಪಾಸ್ ಪೋರ್ಟ್ ಪೇಪರ್ ಬಳಸಿದ ಯುವತಿ

toilet

ನೇಚರ್ ಕಾಲ್ ಗೆ ಅರ್ಜೆಂಟ್ ಆದಾಗ ತಕ್ಷಣಕ್ಕೆ ಶೌಚಾಲಯಕ್ಕೆ ಹೋಗಬೇಕು. ಇಲ್ಲದಿದ್ದರೆ, ಏನೇನು ಅನಾಹುತವಾಗಿಬಿಡುತ್ತದೆ ಎಂಬುದನ್ನು ನೋಡಿರುತ್ತೀರಿ. ಇಲ್ಲೊಬ್ಬ ಯುವತಿ ವಿಮಾನ ನಿಲ್ದಾಣದಲ್ಲಿ ಏನೆಲ್ಲಾ ಅವಾಂತರ ಮಾಡಿದ್ದಾಳೆ ಎಂಬುದನ್ನು ನೀವೇ ನೋಡಿ,

ಅಂದಹಾಗೆ ಈ ಘಟನೆ ನಡೆದಿರುವುದು ಥೈಲ್ಯಾಂಡ್ ವಿಮಾನ ನಿಲ್ದಾಣದಲ್ಲಿ. ಬ್ರಿಟಿಷ್ ಮೂಲದ ಯುವತಿ ಪ್ರವಾಸಕ್ಕೆಂದು ಥೈಲ್ಯಾಂಡ್ ಗೆ ಬಂದಿದ್ದಾಳೆ. ವಿಮಾನ ನಿಲ್ದಾಣದಲ್ಲೇ ಆಕೆಗೆ ತುರ್ತಾಗಿ ಶೌಚಾಲಯಕ್ಕೆ ಹೋಗಬೇಕಾಗಿ ಬಂದಿದೆ. ಸರಿ ಎಂದುಕೊಂಡವಳೇ ಅಲ್ಲೇ ಇದ್ದ ಟಾಯ್ಲೆಟ್ ಗೆ ಹೋಗಿದ್ದಲ್ಲದೇ, ಟಾಯ್ಲೆಟ್ ಪೇಪರ್ ಸಿಗದ ಕಾರಣ ಕೈಯಲ್ಲಿದ್ದ ಪಾಸ್ ಪೋರ್ಟ್ ನಲ್ಲಿನ ಹಾಳೆಗಳನ್ನೇ ಕಿತ್ತುಕೊಂಡು ಬಳಸಿದ್ದಾಳೆ. ನಿಲ್ದಾಣದಲ್ಲಿ ಅಧಿಕಾರಿಗಳು ಹರಿದ ಪಾಸ್ ಪೋರ್ಟ್ ಬಗ್ಗೆ ಪ್ರಶ್ನಿಸಿದಾಗ ಏನೇನು ತಡಬಡಾಯಿಸಿದ್ದಾಳೆ.

ಕೊನೆಗೆ ಆಕೆಯನ್ನು ವಿಚಾರಣೆ ನಡೆಸಿದಾಗ ನೇಚರ್ ಕಾಲ್ ಗೆ ಅರ್ಜೆಂಟಾಗಿದ್ದು, ಶೌಚಾಲಯದಲ್ಲಿ ಟಾಯ್ಲೆಟ್ ಪೇಪರ್ ಇಲ್ಲದ ಕಾರಣ, ಪಾಸ್ ಫೋರ್ಟ್ ಪೇಪರ್ ಬಳಸಿದೆ ಎಂದು ಹೇಳಿದ್ದಾಳೆ ಎನ್ನಲಾಗಿದೆ. ಈ ಯುವತಿಯ ಅವಾಂತರವೀಗ ಎಲ್ಲೆಡೆ ಬಿಸಿಬಿಸಿ ಚರ್ಚೆಗೆ ಒಳಗಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...