alex Certify
ಕನ್ನಡ ದುನಿಯಾ       Mobile App
       

Kannada Duniya

2 ಬೆಡ್ ರೂಂ ಮನೆಗಿಂತ ದುಬಾರಿ ಈ ಟಾಯ್ಲೆಟ್ ಸೀಟ್

ಪ್ರಪಂಚದ ಕೆಲ ಶ್ರೀಮಂತ ವ್ಯಕ್ತಿಗಳಿಗೆ ಹಣವನ್ನು ಹೇಗೆ ಖರ್ಚು ಮಾಡೋದು ಎನ್ನುವ ಚಿಂತೆ ಕಾಡುತ್ತಂತೆ. ಇಂಥ ಕೆಲ ಗಣ್ಯರಿಗಾಗಿ ಅಮೆರಿಕಾದ ಕಲಾವಿದ ಟಾಯ್ಲೆಟ್ ಸೀಟೊಂದನ್ನು ರೆಡಿ ಮಾಡಿದ್ದಾರೆ. ಈ ಟಾಯ್ಲೆಟ್ ಸೀಟ್ 2 ಬೆಡ್ ರೂಂ ಮನೆಗಿಂತ ದುಬಾರಿಯಾಗಿದೆ.

ಇಲ್ಮಾ ಗೋರ್ ಹೆಸರಿನ ಕಲಾವಿದ ಈ ಕಮೋಡ್ ತಯಾರಿಸಿದ್ದಾನೆ. ವಿಶ್ವದ ದುಬಾರಿ ಬ್ರಾಂಡ್ ಗಳಲ್ಲಿ ಒಂದಾದ Louis Vuitton ಐಷಾರಾಮಿ ಬ್ಯಾಗ್ ಬಳಸಿ ಈ ಟಾಯ್ಲೆಟ್ ಸೀಟ್ ಸಿದ್ಧಪಡಿಸಿದ್ದಾರೆ. ಕಂದು ಹಾಗೂ ಸುವರ್ಣ ಬಣ್ಣದ ಈ ಟಾಯ್ಲೆಟ್ ಸೀಟ್ ಮೇಲೆ Louis Vuitton ಕಂಪನಿಯ ಮೊನೊಗ್ರಾಮ್ ಇದೆ.

ಈ ಟಾಯ್ಲೆಟ್ ಸೀಟನ್ನು 15000 ಡಾಲರ್ ಬೆಲೆಯ 24 ಬ್ಯಾಗ್ ಹಾಗೂ 3000 ಡಾಲರ್ ಬೆಲೆಯ ಒಂದು ಸೂಟ್ ಕೇಸ್ ಬಳಸಿ ಸಿದ್ಧಪಡಿಸಲಾಗಿದೆ. ಈ ಟಾಯ್ಲೆಟ್ ಗೆ Loo-uis Vuitton Toilet ಎಂದು ಹೆಸರಿಡಲಾಗಿದೆ. ಇದನ್ನು ತಯಾರಿಸಲು ಮೂರು ತಿಂಗಳು ಬೇಕಾಗಿದೆ.

ಈ ಐಷಾರಾಮಿ ಟಾಯ್ಲೆಟ್ ಸೀಟ್ ಬೆಲೆ 100,000 ಡಾಲರ್. ಅಂದ್ರೆ ಸುಮಾರು 65,40,000 ರೂಪಾಯಿ. ಸಾಮಾನ್ಯವಾಗಿ ಈ ಬೆಲೆಗೆ ದೆಹಲಿ-ಎನ್ ಸಿ ಆರ್ ಪ್ರದೇಶದಲ್ಲಿ 2 ಬೆಡ್ ರೂಮಿನ ಪ್ಲಾಟ್ ಖರೀದಿ ಮಾಡಬಹುದಾಗಿದೆ. tradesy.com ಹೆಸರಿನ ವೆಬ್ ಸೈಟ್ ನಲ್ಲಿ ಈ ಟಾಯ್ಲೆಟ್ ಸೀಟ್ ಲಭ್ಯವಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...