alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ರಾತ್ರಿಯ ವಾಸ್ತವ್ಯದ ಟಾಯ್ಲೆಟ್ ಗೆ 27 ಲಕ್ಷ ರೂ. ಖರ್ಚು !

Yeak-Laom-Lake

ಬಡವರು, ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಪ್ರದೇಶದಲ್ಲಿ ಗಣ್ಯರೊಬ್ಬರು ಒಂದೇ ಒಂದು ದಿನ ಉಳಿಯಲಿದ್ದು, ಅವರು ಉಳಿಯುವ ಸ್ಥಳದಲ್ಲಿ ಶೌಚಾಲಯ ನಿರ್ಮಾಣಕ್ಕೆ ಬರೋಬ್ಬರಿ 27.45 ಲಕ್ಷ ರೂಪಾಯಿ ಖರ್ಚು ಮಾಡಿರುವುದು ವಿವಾದಕ್ಕೀಡಾಗಿದೆ.

ಥಾಯ್ಲೆಂಡ್ ರಾಜಕುಮಾರಿ ಮಹಾಚಕ್ರಿ ಸಿರಿಂಧೋರ್ನ್ ಕಾಂಬೋಡಿಯಾದಲ್ಲಿರುವ ತೀರಾ ಹಿಂದುಳಿದ ಪ್ರದೇಶವೊಂದಕ್ಕೆ ಭೇಟಿ ನೀಡಲಿದ್ದಾರೆ. ರತನಕ್ಕಿರಿ ಎಂಬ ಈ ಪ್ರದೇಶದಲ್ಲಿ ಬಡವರೇ ಅಧಿಕ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಅಲ್ಲದೇ, ಗಣಿಗಾರಿಕೆಯಿಂದ ಶೋಷಣೆಗೆ ಒಳಗಾದ ಜನ, ಕೂಲಿಕಾರ್ಮಿಕರು ಹೆಚ್ಚಾಗಿ ನೆಲೆಸಿದ್ದಾರೆ. ಇಂತಹ ಹಿಂದುಳಿದ ರತನಕ್ಕಿರಿ ಪ್ರದೇಶದಲ್ಲಿನ ಆಸ್ಪತ್ರೆ ಉದ್ಘಾಟನೆಗೆ ರಾಜಕುಮಾರಿ ಬರುತ್ತಿದ್ದಾರೆ. ಅವರು ಈ ಪ್ರದೇಶದಲ್ಲಿರುವ ಪ್ರಸಿದ್ಧ ಯೀಕ್ ಲಾಹೋಮ್ ಸರೋವರದ ತಟದಲ್ಲಿ ಒಂದು ದಿನ ಉಳಿದುಕೊಳ್ಳಲಿದ್ದಾರೆ.

ಹೀಗೆ ಒಂದೇ ಒಂದು ದಿನ ಉಳಿಯುವ ರಾಜಕುಮಾರಿಗೆ ಸರೋವರದ ಸಮೀಪದಲ್ಲಿ 8 ಚದರ ಮೀಟರ್ ವಿಸ್ತೀರ್ಣದಲ್ಲಿ ವಸತಿ ವ್ಯವಸ್ಥೆ ಇರುವ ಶೌಚಾಲಯವನ್ನು ಥಾಯ್ಲೆಂಡ್ ಮೂಲದ ಕಂಪನಿ ಕೇವಲ 19 ದಿನದಲ್ಲಿ ನಿರ್ಮಿಸಿದೆ. ನಿರ್ಮಾಣಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಬ್ಯಾಂಕಾಕ್ ನಿಂದ ತರಿಸಲಾಗಿದೆ. ರಾಜಕುಮಾರಿ ಬಂದು ಹೋದ ನಂತರ ಈ ಟಾಯ್ಲೆಟ್ ಅನ್ನು ನೆಲಸಮ ಮಾಡಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...