alex Certify
ಕನ್ನಡ ದುನಿಯಾ       Mobile App
       

Kannada Duniya

ಪುಟ್ಟ ಸಹೋದರರ ಈ ವಿಡಿಯೋ ನೋಡಿದ್ದಾರೆ 32 ಲಕ್ಷ ಮಂದಿ

brothers_650x400_51497017062

ಇಬ್ಬರು ಪುಟಾಣಿ ಸಹೋದರರು ಇಂಟರ್ನೆಟ್ ಅನ್ನೇ ತುದಿಗಾಲಲ್ಲಿ ನಿಲ್ಲಿಸಿದ್ದಾರೆ. ಅವರ ತುಂಟಾಟ ಹಾಗೂ ಇಬ್ಬರ ಮಧ್ಯೆ ಇರೋ ಪ್ರೀತಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಟಕಟೆಯಿಂದ ಹೊರಬರೋದು ಹೇಗೆ ಅನ್ನೋದನ್ನು ಪುಟ್ಟ ತಮ್ಮನಿಗೆ, ಅಣ್ಣ ಕಲಿಸಿದ್ದಾನೆ.

ಈ ವಿಡಿಯೋ ಫೇಸ್ಬುಕ್ ನಲ್ಲಿ ಅಪ್ ಲೋಡ್ ಆಗಿದ್ದು, 32 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಮಗು ತುಂಬಾ ತರ್ಲೆ ಮಾಡತ್ತೆ ಅಂತಾ ಹೆತ್ತವರು ಕಟಕಟೆಯೊಳಗೆ ಮಲಗಿಸಿದ್ರು. ಆದ್ರೆ ತಮ್ಮ ಕಟಕಟೆಯಲ್ಲಿ ಬಂಧಿಯಾಗಿರೋದು ನೋಡಿ ಅಣ್ಣನಿಗೆ ಸಂಕಟ, ಜೊತೆಯಾಗಿ ಆಡೋಣ ಅನ್ನೋ ತವಕ.

ಕುರ್ಚಿಯೊಂದನ್ನು ತಂದು ಕಟಕಟೆಯೊಳಗಿಟ್ಟ ಬಾಲಕ, ಮೇಲಕ್ಕೆ ಬರುವಂತೆ ತಮ್ಮನಿಗೆ ಸೂಚಿಸಿದ್ದ. ಕುರ್ಚಿ ಏರಿ ಜಂಪ್ ಮಾಡು, ಏನೂ ಆಗಲ್ಲ ಅಂತಾ ಧೈರ್ಯ ಹೇಳಿದ್ದ. ಅಣ್ಣನ ಸೂಚನೆಯಂತೆ ಪುಟ್ಟ ಮಗು ಕುರ್ಚಿ ಏರಿ ಕೆಳಕ್ಕೆ ಹಾರಿದೆ. ತಮ್ಮನ ಸಾಹಸ ನೋಡಿ ಪುಟ್ಟ ಅಣ್ಣ ಶಹಬ್ಬಾಸ್ ಎಂದಿದ್ದಾನೆ. ಕೊನೆಗೆ ಇಬ್ಬರೂ ಆಟವಾಡಲು ತೆರಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...