alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಟಿ ಹುಚ್ಚಿನಲ್ಲಿ 10 ತಾಸು ಮಗುವನ್ನು ಕಾರಿನಲ್ಲಿ ಬಿಟ್ಟ ಮಹಿಳೆ

ಮಗು ಹತ್ಯೆ ಪ್ರಕರಣದಲ್ಲಿ ಅಮೆರಿಕಾ ಪೊಲೀಸರು ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾದ 23 ವರ್ಷದ ಎಜೆಕ್ಸಾಂಡ್ರಾ ರಾವೆಲ್ ಸ್ಕಾಟ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಕಾಟ್ 10 ಗಂಟೆಗಳ ಕಾಲ 18 ತಿಂಗಳ ಮಗುವನ್ನು ಕಾರಿನಲ್ಲಿ ಬಿಟ್ಟು ಹೋಗಿದ್ದಳು. 130 ಡಿಗ್ರಿ ಉಷ್ಣಾಂಶದಲ್ಲಿದ್ದ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ.

ಸ್ನೇಹಿತರ ಮನೆಗೆ ಪಾರ್ಟಿಗೆಂದು ಬಂದಿದ್ದ ಮಹಿಳೆ ಮಗುವನ್ನು ಕಾರ್ ನಲ್ಲಿ ಲಾಕ್ ಮಾಡಿ ಪಾರ್ಕಿಂಗ್ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಳು. ಆಗಾಗ ಪಾರ್ಟಿಗೆ ಹೋಗ್ತಿದ್ದ ಸ್ಕೆಟ್ ಬುಧವಾರ 18 ತಿಂಗಳ ಮಗುವನ್ನೂ ಕರೆದುಕೊಂಡು ಹೋಗಿದ್ದಾಳೆ. ಮಗು ಹಿಂಬದಿ ಸೀಟಿನಲ್ಲಿ ಮಲಗಿತ್ತು.

ರಾತ್ರಿ ಕಾರು ಚಲಾಯಿಸುತ್ತಿದ್ದ ಸ್ಕಾರ್ಟ್ ಬೆಳಗಿನ ಜಾವ 3 ಗಂಟೆಗೆ ಸ್ನೇಹಿತರ ಮನೆ ತಲುಪಿದ್ದಾಳೆ. ಹಿಂಬದಿ ಸೀಟಿನಲ್ಲಿದ್ದ ಮಗುವನ್ನು ಮರೆತು ಪಾರ್ಟಿಗೆ ಹೋಗಿದ್ದಾಳೆ. 10 ತಾಸಿನ ನಂತ್ರ ಆಕೆಗೆ ಮಗುವಿನ ನೆನಪಾಗಿದೆ. ಆದ್ರೆ ಮಗು ಅತಿ ಉಷ್ಣತೆಗೆ ಸಾವನ್ನಪ್ಪಿತ್ತು.

ಹವಾಮಾನ ಇಲಾಖೆ ಪ್ರಕಾರ ಸ್ಕಾಟ್ ಹೋಗಿದ್ದ ಸ್ಥಳ ಮರಭೂಮಿ. ಅಲ್ಲಿನ ಉಷ್ಣತೆ 80 ಡಿಗ್ರಿ. ಕಾರಿನಲ್ಲಿ ಉಷ್ಣತೆ 150 ಡಿಗ್ರಿಯಾಗಿದ್ದರಿಂದ ಮಗು ಸಾವನ್ನಪ್ಪಿದೆ. ಆದ್ರೆ ಮಗು ಸಾವಿಗೆ ಮುಖ್ಯ ಕಾರಣ ನಿರ್ಲಕ್ಷ್ಯ. ಮುಂದಿನ ದಿನಗಳಲ್ಲಿ ಇಂಥ ಘಟನೆ ನಡೆಯಬಾರದೆಂಬ ಕಾರಣಕ್ಕೆ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...