alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿನಲ್ಲೂ ಕಂದಮ್ಮನಿಗೆ ಜೊತೆಯಾಯ್ತು ಮುದ್ದಿನ ನಾಯಿ

fire

ಕಳೆದ ಶುಕ್ರವಾರ ವಾಷಿಂಗ್ಟನ್ ನ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಒಂದು ನಾಯಿ ಹಾಗೂ ಒಟ್ಟು 6 ಮಂದಿ ಸದಸ್ಯರು ಆ ಮನೆಯಲ್ಲಿ ವಾಸವಾಗಿದ್ರು. ಬೆಂಕಿಯ ತೀವ್ರತೆ ಎಷ್ಟು ಹೆಚ್ಚಾಗಿತ್ತೆಂದ್ರೆ ಕ್ಷಣಮಾತ್ರದಲ್ಲಿ 1000 ಡಿಗ್ರಿವರೆಗೂ ವ್ಯಾಪಿಸಿತ್ತು. ಮನೆಯಲ್ಲಿದ್ದ ಪೀಠೋಪಕರಣಗಳೆಲ್ಲ ಹೊತ್ತಿ ಉರಿದವು.

ಮನೆಗೆ ಬೆಂಕಿ ಬಿದ್ದಿದೆ ಅನ್ನೋದು ಗೊತ್ತಾಗ್ತಿದ್ದಂತೆ ದಂಪತಿ ಮೂವರು ಮಕ್ಕಳೊಂದಿಗೆ ಹೊರಕ್ಕೆ ಬಂದ್ರು. 3 ವರ್ಷದ ಕಿರಿಯ ಮಗು ಮಾತ್ರ ಮನೆಯೊಳಗೆ ಉಳಿದಿತ್ತು. ಸ್ಥಳಕ್ಕೆ ಬಂದ ಪೊಲೀಸರು ಒಳಕ್ಕೆ ಹೋಗಲು ಯತ್ನಿಸಿದರಾದ್ರೂ ಹೊಗೆ ಮತ್ತು ಬಿಸಿಯಿಂದಾಗಿ ಸಾಧ್ಯವಾಗಲಿಲ್ಲ. ಬೆಂಕಿ ಆರಿಸಿ ಒಳಹೋಗಿ ನೋಡುವಷ್ಟರಲ್ಲಿ ಪರಿಸ್ಥಿತಿ ಕೈಮೀರಿತ್ತು.

ಪುಟ್ಟ ಕಂದಮ್ಮ ತನ್ನ ಮುದ್ದಿನ ನಾಯಿ ಹಾಗೂ ಗೊಂಬೆಯ ಜೊತೆ ಶವವಾಗಿ ಬಿದ್ದಿತ್ತು. ಈ ಘಟನೆಯನ್ನು ನೋಡಿದ ಪ್ರತಿಯೊಬ್ಬರೂ ಕಣ್ಣೀರಿಟ್ಟಿದ್ದಾರೆ. ಮಗು, ನಾಯಿಯನ್ನು ಎಷ್ಟು ಪ್ರೀತಿಸ್ತಾ ಇತ್ತು ಅನ್ನೋದಕ್ಕೆ ಇದೇ ಸಾಕ್ಷಿ ಅಂತಾ ಟ್ಟಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...