alex Certify
ಕನ್ನಡ ದುನಿಯಾ       Mobile App
       

Kannada Duniya

ತರಗತಿಯಲ್ಲಿ ಮೊಬೈಲ್ ಬಳಸ್ತೀರಾ? ಹಾಗಿದ್ರೆ ಈ ಸುದ್ದಿ ಓದಿ

ತರಗತಿಯೊಳಕ್ಕೆ ಮೊಬೈಲ್‌ ಫೋನ್‌ ಬಳಕೆ ಮಾಡುವುದರಿಂದ ವಾರ್ಷಿಕ ಶೈಕ್ಷಣಿಕ ಪರೀಕ್ಷೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅಮೆರಿಕದಲ್ಲಿ ನಡೆಸಲಾದ ಅಧ್ಯಯನದಲ್ಲಿ ದೃಢಪಟ್ಟಿದೆ.

ಸಂಶೋಧನೆಯಲ್ಲಿ ಕಂಡು ಬಂದ ಅಂಶಗಳನ್ನು ಯುಎಸ್‌ನ ನಿಯತಕಾಲಿಕವೊಂದರಲ್ಲಿ ಪ್ರಕಟಿಸಲಾಗಿದ್ದು, ತರಗತಿಯಲ್ಲಿ ಶೈಕ್ಷಣಿಕ ವಿಚಾರವನ್ನು ಹೊರತುಪಡಿಸಿ, ಅನಗತ್ಯ ವಿಷಯಗಳಿಗಾಗಿ ಮೊಬೈಲ್‌, ಟ್ಯಾಬ್ಲೆಟ್‌ಗಳನ್ನು ಪಾಠದ ನಡುವೆ ಬಳಸುವುದರಿಂದ ಮಕ್ಕಳ ಪರೀಕ್ಷಾ ಸಾಮರ್ಥ್ಯದಲ್ಲಿ ವ್ಯತ್ಯಾಸವಾಗುತ್ತದೆ. ಇದರಿಂದ ವಾರ್ಷಿಕ ಅಂಕ ಪಟ್ಟಿಯಲ್ಲಿ ಕಡಿಮೆ ಅಂಕ ದಾಖಲಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಧ್ಯಯನಕ್ಕಾಗಿ ವಿಶ್ವವಿದ್ಯಾಲಯವೊಂದರ 100 ಮಂದಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಶೇ.50ರಷ್ಟು ವಿದ್ಯಾರ್ಥಿಗಳಿಗೆ ತರಗತಿಯೊಳಕ್ಕೆ ಮೊಬೈಲ್‌, ಟ್ಯಾಬ್ಲೆಟ್‌ ಬಳಕೆಯನ್ನು ನಿಷೇಧಿಸಿದರೆ, ಉಳಿದವರಿಗೆ ಯಾವುದೇ ನಿರ್ಬಂಧ ಹೇರಲಾಗಿರಲಿಲ್ಲ.

ಅಧ್ಯಯನದ ಪ್ರಕಾರ, ಮಕ್ಕಳ ವಾರ್ಷಿಕ ಪರೀಕ್ಷೆ ಅಂಕದ ಮೇಲೆ ಈ ವಿಚಾರ ಪರಿಣಾಮ ಬೀರಿದೆ. ಶೈಕ್ಷಣಿಕ ಅಲ್ಲದೆ ಬೇರೆ ವಿಚಾರಗಳಿಗೆ ತರಗತಿಯ ನಡುವೆ ಮೊಬೈಲ್‌ ಬಳಕೆ ಮಾಡಿದ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದಿರುವುದು ಗೊತ್ತಾಗಿದೆ. ಮೊಬೈಲ್‌ ಬಳಕೆ ಮಾಡದೇ ಇರುವವರು ಉತ್ತಮ ಅಂಕ ಗಳಿಸಿದ್ದಾರೆ ಎಂಬ ಅಂಶ ಬಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...