alex Certify
ಕನ್ನಡ ದುನಿಯಾ       Mobile App
       

Kannada Duniya

ಭಾವಿ ಪತ್ನಿಯನ್ನು ಭೇಟಿಯಾಗಲು ಯುವಕನ ಹುಚ್ಚು ಸಾಹಸ

ಭಾರತೀಯ ಮೂಲದ ಎಂಜಿನಿಯರ್ ಒಬ್ಬ ಶಾರ್ಜಾ ಇಂಟರ್ ನ್ಯಾಶನಲ್ ವಿಮಾನ ನಿಲ್ದಾಣದಲ್ಲಿ ರನ್ ವೇಗೆ ನುಗ್ಗುವ ಮೂಲಕ ಬಂಧನಕ್ಕೊಳಗಾಗಿದ್ದಾನೆ. 26ರ ಹರೆಯದ ಈ ಯುವಕ ತನ್ನ ಭಾವಿ ಪತ್ನಿಯನ್ನು ಭೇಟಿಯಾಗುವ ತವಕದಲ್ಲಿದ್ದ. ಅವಸರದಲ್ಲಿ ವಿಮಾನವೇರಲು ಓಡಿ ಬಂದಿದ್ದಾನೆ.

ಈ ವೇಳೆ ರನ್ ವೇಗೆ ನುಗ್ಗಿದ್ದರಿಂದ ವಿಮಾನ ನಿಲ್ದಾಣದಲ್ಲಿರೋ ಭದ್ರತಾ ಸಿಬ್ಬಂದಿ ಆತನನ್ನು ಅರೆಸ್ಟ್ ಮಾಡಿದ್ದಾರೆ. ಸಿವಿಲ್ ಎಂಜಿನಿಯರ್ ಆಗಿರೋ ಇವನನ್ನು ಆರ್ ಕೆ ಅಂತಾ ಗುರುತಿಸಲಾಗಿದೆ. ಅವನ ಬಳಿ ಪಾಸ್ಪೋರ್ಟ್ ಕೂಡ ಇರಲಿಲ್ಲ. ಅದನ್ನು ಕಂಪನಿಯ ಮಾಲೀಕ ತನ್ನ ಬಳಿ ಇಟ್ಟುಕೊಂಡಿದ್ದ.

ಹೇಗಾದ್ರೂ ಮಾಡಿ ಭಾವಿ ಪತ್ನಿಯನ್ನು ಭೇಟಿಯಾಗಬೇಕೆಂಬ ತವಕ ಅವನಿಗಿತ್ತು. ಹಾಗಾಗಿ ಏರ್ ಪೋರ್ಟ್ ಗೋಡೆ ಹತ್ತಿ ನೇರವಾಗಿ ರನ್ ವೇ ಬಳಿ ಬಂದಿದ್ದ. ಭಾರತಕ್ಕೆ ತೆರಳಿ ಭಾವಿ ಪತ್ನಿಯನ್ನು ಭೇಟಿಯಾಗಬೇಕೆಂಬ ಆಸೆಯಿಂದ ಈ ರೀತಿ ಮಾಡಿದ್ದೇನೆ ಅಂತಾ ಆರ್ ಕೆ ಒಪ್ಪಿಕೊಂಡಿದ್ದಾನೆ.

ಟಿಕೆಟ್, ಪಾಸ್ಪೋರ್ಟ್, ಬ್ಯಾಗ್ ಯಾವುದೂ ಅವನ ಬಳಿ ಇರಲಿಲ್ಲ. ಪರ್ಸ್ ತೆಗೆದುಕೊಂಡು ಮನೆಯಿಂದ ಹೊರಬಿದ್ದಿದ್ದ ಆತ ನೇರವಾಗಿ ಗೋಡೆ ಹತ್ತಿ, ರನ್ ವೇಗೆ ಬಂದು ಅಲ್ಲಿ ವಿಮಾನ ಏರಲು ಪ್ರಯತ್ನಿಸಿದ್ದಾನೆ. ಅಕಸ್ಮಾತ್ ಸಿಕ್ಕಿಬಿದ್ರೆ ಕೋರ್ಟ್ ಪ್ರಕ್ರಿಯೆಯ ನೆಪದಲ್ಲಿ ತನ್ನ ಪಾಸ್ಪೋರ್ಟ್ ಮರಳಿ ಸಿಗಲಿದೆ, ಜೊತೆಗೆ ಯುಎಇ ಇಂದು ತನ್ನನ್ನು ಗಡಿಪಾರು ಮಾಡ್ತಾರೆ ಅನ್ನೋ ಲೆಕ್ಕಾಚಾರದ ಮೇಲೆ ಯುವಕ ಈ ರೀತಿ ಮಾಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...