alex Certify
ಕನ್ನಡ ದುನಿಯಾ       Mobile App
       

Kannada Duniya

ಮೂತ್ರ ವಿಸರ್ಜಿಸಲು ಇರಿಸಲಾಗಿದೆ ಟ್ರಂಪ್ ಪುತ್ಥಳಿ

ರಸ್ತೆ ಬದಿಯಲ್ಲಿ ಇಲ್ಲಿ ಪಾರ್ಕಿಂಗ್ ಮಾಡಬೇಡಿ, ಇಲ್ಲಿ ಧೂಮಪಾನ ನಿಷೇಧಿಸಿದೆ, ಇಲ್ಲಿ ಮೂತ್ರ ಮಾಡಬಾರದು ಎಂದೆಲ್ಲ ಬರೆದಿರುವುದು ಕಾಣಿಸಿದರೆ ಅಚ್ಚರಿ ಏನಲ್ಲ. ಆದರೆ “ಇಲ್ಲಿ ಮೂತ್ರ ಮಾಡಿ” ಎಂದು ಬರೆದರೆ, ಅದೂ ವ್ಯಕ್ತಿಯೊಬ್ಬನ ಪುತ್ಥಳಿ ಇಟ್ಟು ಅದರ ಕೆಳಗೆ “ಇಲ್ಲಿ ಮೂತ್ರ ಮಾಡಿ” ಎಂದು ಬರೆದರೆ ಹೇಗಿರಬೇಡ..!!

ಅಷ್ಟಕ್ಕೂ ಹೀಗೊಂದು ವಿಚಿತ್ರ ಅವಹೇಳನಕ್ಕೆ ಒಳಗಾಗಿದ್ದು ಬೇರಾರೂ ಅಲ್ಲ, ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್. ಅಂದಹಾಗೆ ಇಂಥ ಬರಹಗಳು ಕಂಡುಬಂದಿದ್ದು ನ್ಯೂಯಾರ್ಕ್‍ನ ಬ್ರೂಕ್ಲಿನ್‍ನಲ್ಲಿ. ಹೀಗೆ ಅಲ್ಲಲ್ಲಿ ಟ್ರಂಪ್ ಪುತ್ಥಳಿಗಳನ್ನು ಇಟ್ಟು, ಅದರ ಕೆಳಗೆ “ಇಲ್ಲಿ ಮೂತ್ರ ಮಾಡಿ” ಎಂದು ಬರೆಸಿದ್ದು ಜಾಹೀರಾತು ಸಂಸ್ಥೆಯೊಂದರ ಮುಖ್ಯಸ್ಥ ಫಿಲ್ ಗೇಬಲ್ ಎಂಬಾತ.

ಅಮೆರಿಕ ಅಧ್ಯಕ್ಷನಾಗಿ ಹಾಗೂ ವೈಯಕ್ತಿಕವಾಗಿ ಟ್ರಂಪ್ ತೋರಿರುವ ನಿಲುವುಗಳ ಬಗ್ಗೆ ನನ್ನ ಅಸಹನೆ-ಧಿಕ್ಕಾರವನ್ನು ಅಭಿವ್ಯಕ್ತಿಪಡಿಸುವ ಸಲುವಾಗಿ ಹೀಗೆ ಹಾಕಿಸಿದ್ದೇನೆ ಎಂದು ಸಮರ್ಥಿಸಿಕೊಳ್ಳುತ್ತಾರೆ ಫಿಲ್. ತನ್ನನ್ನು ತಾನು ಯುವಕ ಎಂದು ಟ್ರಂಪ್ ಭಾವಿಸಿರುವುದರಿಂದ ಯುವಕ ಟ್ರಂಪ್‍ನ ಮೂರ್ತಿಗಳನ್ನು ಇರಿಸಿದ್ದೇನೆ ಎನ್ನುತ್ತಾರೆ. ಇಷ್ಟಕ್ಕೆ ಸುಮ್ಮನಾಗದ ಈ ವ್ಯಕ್ತಿ ನಾಯಿಗಳನ್ನೂ ಸೆಳೆಯುವಂತಹ ವಸ್ತುಗಳನ್ನು ಈ ಫಲಕಗಳ ಬಳಿ ಸಿಂಪಡಿಸಿದ್ದಾನಂತೆ. ಒಟ್ಟಿನಲ್ಲಿ ಇದರ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...