alex Certify
ಕನ್ನಡ ದುನಿಯಾ       Mobile App
       

Kannada Duniya

ಮಗು ಅಳ್ತಿದೆ ಅಂತಾ ಭಾರತೀಯ ಕುಟುಂಬವನ್ನು ವಿಮಾನದಿಂದ ಕೆಳಗಿಳಿಸಿದ್ರು….

ಮೂರು ವರ್ಷದ ಮಗು ಅಳ್ತಿದ್ದ ಕಾರಣ ಭಾರತೀಯ ಕುಟುಂಬವೊಂದನ್ನು ಲಂಡನ್ ವಿಮಾನದಿಂದ ಕೆಳಗಿಳಿಸಲಾಗಿದೆ. ಈ ಘಟನೆ ಜುಲೈ 23 ರಂದು ಲಂಡನ್-ಬರ್ಲಿನ್ ಫ್ಲೈಟ್ ನಲ್ಲಿ ನಡೆದಿದೆ. ಮಗುವಿನ ತಂದೆ ಕೆಟ್ಟ ನಡವಳಿಕೆ ಹಾಗೂ ಜನಾಂಗೀಯ ನಿಂದನೆ ಆರೋಪ ಹೊರಿಸಿ ಸಚಿವ ಸುರೇಶ್ ಪ್ರಭು ಅವ್ರಿಗೆ ಪತ್ರ ಬರೆದಿದ್ದಾರೆ.

ವರದಿ ಪ್ರಕಾರ, ಮಗು ತಾಯಿ ಟೇಕ್ ಆಪ್ ಗೂ ಮುನ್ನವೇ ಮಗುವನ್ನು ಶಾಂತಗೊಳಿಸಿದ್ದಳಂತೆ. ಈ ಮಧ್ಯೆ ಸಿಬ್ಬಂದಿಯ ಬೈಗುಳಕ್ಕೆ ಮತ್ತೆ ಮಗು ಅಳಲು ಶುರು ಮಾಡಿದೆ. ಇದಾದ ನಂತ್ರ ವಿಮಾನವನ್ನು ಟರ್ಮಿನಲ್ ಗೆ ಹಿಂತಿರುಗಿಸಲಾಯಿತು. ನಂತ್ರ ಮಗುವಿನ ಕುಟುಂಬ ಹಾಗೂ ಕೆಲ ಭಾರತೀಯರನ್ನು ವಿಮಾನದಿಂದ ಕೆಳಗಿಳಿಸಲಾಯ್ತು.

ವಿಮಾನದಲ್ಲಿ ಏನೆಲ್ಲ ನಡೀತು ಎಂಬ ವಿಚಾರವನ್ನು ಮಗುವಿನ ತಂದೆ ಪತ್ರದಲ್ಲಿ ವಿವರವಾಗಿ ಹೇಳಿದ್ದಾರೆ. ಸಿಬ್ಬಂದಿ ವರ್ಣಬೇಧ ನೀತಿ ಅನುಸರಿಸಿದ್ದಲ್ಲದೆ, ನಮಗೆ ಬ್ಲಡಿ ಎಂಬ ಶಬ್ದ ಬಳಸಿದ್ರು ಎಂದು ತಂದೆ ನೋವು ತೋಡಿಕೊಂಡಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತೇವೆಂದು ಬ್ರಿಟಿಷ್ ಏರ್ವೇಸ್ ವಕ್ತಾರರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...