alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ವೈರಲ್ ಆಯ್ತು ಯುವತಿಯರ ಫೋಟೋ

ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದ ಚೀನಾದ ಮೂವರು ಯುವತಿಯರನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಅವರ ಪಾಸ್ಪೋರ್ಟ್ ನಲ್ಲಿದ್ದ ಫೋಟೋಗೂ, ಈಗಿರುವ ಮುಖ ಚಹರೆಗೂ ಹೋಲಿಕೆಯೇ ಇರಲಿಲ್ಲ. ಹಾಗಾಗಿ ಅನುಮಾನ ವ್ಯಕ್ತಪಡಿಸಿದ ದಕ್ಷಿಣ ಕೊರಿಯಾ ಏರ್ಪೋರ್ಟ್ ಅಧಿಕಾರಿಗಳು ಮೂವರನ್ನು ವಶಕ್ಕೆ ಪಡೆದ್ರು.

ಸರ್ಜರಿ ಬಳಿಕ ಯುವತಿಯರ ಮುಖ ಊದಿಕೊಂಡಿತ್ತು. ಮುಖಕ್ಕೆ ಪೂರ್ತಿ ಬ್ಯಾಂಡೇಜ್ ಹಾಕಲಾಗಿತ್ತು. ಈ ಫೋಟೋ ಕೂಡ ವೈರಲ್ ಆಗಿದ್ದು, 51,000ಕ್ಕೂ ಅಧಿಕ ಲೈಕ್ಸ್ ಬಂದಿವೆ. 23,000 ಮಂದಿ ಇದನ್ನು ಶೇರ್ ಮಾಡಿದ್ದಾರೆ. ಈ ಮೂವರೂ ದಕ್ಷಿಣ ಕೊರಿಯಾದಲ್ಲಿ ಹಾಲಿಡೇ ಕಳೆಯಲು ಬಂದಿದ್ರು.

ಅಲ್ಲಿಂದ ವಾಪಸ್ ತೆರಳುವ ಸಂದರ್ಭದಲ್ಲಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಪಾಸ್ಪೋರ್ಟ್, ವಿಮಾನದ ಟಿಕೆಟ್ ಹಾಗೂ ಇತರ ದಾಖಲೆಗಳೆಲ್ಲವೂ ಸರಿಯಾಗಿಯೇ ಇತ್ತು. ಆದ್ರೆ ಮುಖ ವಿಕಾರವಾಗಿದ್ದರಿಂದ ಪಾಸ್ಪೋರ್ಟ್ ನಲ್ಲಿದ್ದವರೇ ತಾವು ಅನ್ನೋದನ್ನು ಸಾಬೀತು ಮಾಡಲು ಯುವತಿಯರಿಂದ ಸಾಧ್ಯವಾಗಿರಲಿಲ್ಲ.

ದಕ್ಷಿಣ ಕೊರಿಯಾ ಪ್ಲಾಸ್ಟಿಕ್ ಸರ್ಜರಿಗೆ ಹೆಸರುವಾಸಿ. ಕಳೆದ ಒಂದು ದಶಕದಿಂದ್ಲೂ ಚೀನಾದ ಯುವತಿಯರು ಇಲ್ಲಿಗೆ ಬಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ತಾರೆ. ಇಲ್ಲಿ ಸರ್ಜರಿ ಜೊತೆಗೆ ವಿಶೇಷ ಪ್ರವಾಸದ ಪ್ಯಾಕೇಜ್ ಗಳು ಕೂಡ ಲಭ್ಯವಿವೆ. ಹಾಗಾಗಿ ಈ ಮೂವರು ಕೂಡ ಇಲ್ಲೇ ಸರ್ಜರಿ ಮಾಡಿಸಿಕೊಂಡಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...