alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಡ್ಗಿಚ್ಚಿನ ರುದ್ರನರ್ತನಕ್ಕೆ ತತ್ತರಿಸಿದೆ ಕ್ಯಾಲಿಫೋರ್ನಿಯಾ

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಈಗ ಅಗ್ನಿಯ ರುದ್ರನರ್ತನ ನಡೀತಿದೆ. ಉತ್ತರ ಕ್ಯಾಲಿಫೋರ್ನಿಯಾದ ಕ್ಲಿಯರ್ ಲೇಕ್ ಓಕಾ ಅರಣ್ಯ ಪ್ರದೇಶದಲ್ಲಿ ಶನಿವಾರ ಕಾಣಿಸಿಕೊಂಡಿರುವ ಕಾಡ್ಗಿಚ್ಚು ವನ್ಯಜೀವಿಗಳಿಗೆ ಮಾತ್ರವಲ್ಲ ಜನಸಾಮಾನ್ಯರ ಜೀವನವನ್ನು ಸುಡುತ್ತಿದೆ.

ಕಾಡ್ಗಿಚ್ಚನ್ನ ತಹಬಂದಿಗೆ ತರೋಕೆ ಅರಣ್ಯ ಸಿಬ್ಬಂದಿ ನಡೆಸ್ತಿರೋ ಪ್ರಯತ್ನಗಳಿಗೆ ಅಗ್ನಿ ದೇವ ತಣ್ಣಗಾಗ್ತಿಲ್ಲ. ಈಗಾಗ್ಲೇ ಕ್ಲಿಯರ್ ಲೇಕ್ ಓಕಾ ಪ್ರದೇಶದಲ್ಲಿನ 31 ಚದರ ಕಿಲೋಮೀಟರ್ನಷ್ಟು ಅರಣ್ಯ ಪ್ರದೇಶ ಅಗ್ನಿಗೆ ಆಹುತಿಯಾಗಿದೆ. ಸ್ಪ್ರಿಂಗ್ ವ್ಯಾಲಿ ಪ್ರದೇಶದಲ್ಲಿರೋ 12 ಕಟ್ಟಡಗಳಿಗೂ ಬೆಂಕಿ ವ್ಯಾಪಿಸಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅಲ್ಲಿಂದ 3000 ಜನರನ್ನ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.

2017 ರ ಅಕ್ಟೋಬರ್ ನಲ್ಲಿ ಕಾಣಿಸಿಕೊಂಡಿದ್ದ ಧೂಳಿನ ಬಿರುಗಾಳಿ ಮತ್ತು ಕಾಡ್ಗಿಚ್ಚಿಗೆ 44 ಮಂದಿ ಬಲಿಯಾಗಿದ್ದರು. ನೂರಾರು ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಈಗ ಮತ್ತೊಮ್ಮೆ ಪ್ರಕೃತಿ ತನ್ನ ಕೋಪವನ್ನ ಜನ ಸಾಮಾನ್ಯರ ಮೇಲೆ ತೋರಿಸುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...