alex Certify
ಕನ್ನಡ ದುನಿಯಾ       Mobile App
       

Kannada Duniya

ಒಳ ಉಡುಪಿನ ಫೋಟೋ ಶೇರ್ ಮಾಡ್ತಿದ್ದಾರೆ ಮಹಿಳೆಯರು…! ಕಾರಣವೇನು ಗೊತ್ತಾ…?

‘ಮೀ ಟೂ’ ಅಭಿಯಾನದ ಬಳಿಕ ಮಹಿಳೆಯರ ಹೊಸದೊಂದು ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ವಿಶ್ವಾದ್ಯಂತದ ಮಹಿಳೆಯರೆಲ್ಲಾ ತಮ್ಮ ಅಂಡರ್‌ವೇರ್ ಫೋಟೋವನ್ನು ‘#ThisIsNotConsent’ ಹ್ಯಾಶ್‌ಟ್ಯಾಗ್‌ ನ ಅಡಿಯಲ್ಲಿ ಶೇರ್ ಮಾಡುತ್ತಿದ್ದಾರೆ. ಯಾಕೆ ಗೊತ್ತಾ?

ಐರ್ಲೆಂಡ್‌ ನಲ್ಲಿ ಸಂತ್ರಸ್ತೆಯ ಅಂಡರ್‌ ವೇರ್ ಅನ್ನು ಆಧಾರವಾಗಿಟ್ಟುಕೊಂಡು 27 ವಯಸ್ಸಿನ ವ್ಯಕ್ತಿಯೊಬ್ಬನನ್ನು ಅತ್ಯಾಚಾರ ಆರೋಪದಿಂದ ದೋಷಮುಕ್ತಗೊಳಿಸಲಾಯಿತು. ಇದರ ವಿರುದ್ಧ ಮಹಿಳೆಯರು ‘#ಇದು ಸಮ್ಮತಿಯಲ್ಲ’ ಎಂಬರ್ಥದ ಹ್ಯಾಶ್‌ ಟ್ಯಾಗ್‌ನ ಅಡಿಯಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಐರ್ಲೆಂಡ್‌ನಲ್ಲಿ 17 ಹರೆಯದ ಬಾಲೆಯ ಮೇಲೆ ಅತ್ಯಾಚಾರವಾಗಿತ್ತು. ನ.6ರಂದು ಈ ಪ್ರಕರಣದ ತೀರ್ಪು ಬರುವ ಮುನ್ನ ನಡೆದ ವಿಚಾರಣೆ ವೇಳೆ, ಆರೋಪಿ ಪರ ವಕೀಲ, ಕೋರ್ಟ್‌ನಲ್ಲಿ ಈ ಯುವತಿಯ ಅಂಡರ್‌ವೇರ್ ಅನ್ನು ಪ್ರದರ್ಶಿಸಿ, ಇವಳು ಯಾವ ರೀತಿ ಉಡುಗೆ ಧರಿಸಿದ್ದಳು ನೋಡಿ, ಎದುರುಗಡೆ ಲೇಸ್ ಇರುವ ಅಂಡರ್‌ವೇರ್ ಹಾಕಿಕೊಂಡಿದ್ದಳು. ಇದನ್ನು ಬಲವಂತವಾಗಿ ಬಿಚ್ಚಲು ಸಾಧ್ಯವಿಲ್ಲ. ಆಕೆಯ ಸಮ್ಮತಿಯಿಂದಲೇ ಸಂಭೋಗ ನಡೆದಿದೆ ಎಂದು ವಾದಿಸಿದ್ದರು. ಬಳಿಕ 8 ನ್ಯಾಯಾಧೀಶರ ನ್ಯಾಯಪೀಠ ಅತ್ಯಾಚಾರ ಆರೋಪಿಯನ್ನು ದೋಷಮುಕ್ತಗೊಳಿಸಿತ್ತು.

ಮಹಿಳೆಯ ಸಮ್ಮತಿಯಿತ್ತು ಎಂದು ಬಿಂಬಿಸಲು ಅಂಡರ್‌ವೇರ್ ಬಳಸಿದ ಕ್ರಮದ ವಿರುದ್ಧ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಐರ್ಲೆಂಡ್‌ನಲ್ಲಿ ಆರಂಭವಾದ ಈ ಸೋಷಿಯಲ್ ಮೀಡಿಯಾ ಅಭಿಯಾನ ಈಗ ವಿಶ್ವಾದ್ಯಂತ ಹಬ್ಬಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...