alex Certify
ಕನ್ನಡ ದುನಿಯಾ       Mobile App
       

Kannada Duniya

ದೈತ್ಯ ಹೆಬ್ಬಾವಿನ ಪಕ್ಕ ಈತ ಮಲಗಿದ್ದೇಕೆ?

601532-python-1

ಇತ್ತೀಚೆಗಷ್ಟೆ ಆಸ್ಟ್ರೇಲಿಯಾದ ರಸ್ತೆಯಲ್ಲಿ ಉದ್ದಕ್ಕೆ ಮಲಗಿದ್ದ ಹೆಬ್ಬಾವು ವ್ಯಕ್ತಿಯೊಬ್ಬನ ಕಣ್ಣಿಗೆ ಬಿದ್ದಿತ್ತು. ಹೆಬ್ಬಾವು ನೋಡಿದ್ದೇ ತಡ ಆತ ಏನ್ಮಾಡಿದ್ದಾನೆ ಗೊತ್ತಾ? ತಾನು ಕೂಡ ಅದರ ಪಕ್ಕದಲ್ಲೇ ಮಲಗಿಬಿಟ್ಟಿದ್ದಾನೆ. ಪಿಲ್ಬರಾ ರಿಕ್ ಒಲಿವ್ ಹೆಸರಿನ ಹೆಬ್ಬಾವು ಇದಾಗಿದ್ದು, ಅಳಿವಿನಂಚಿನಲ್ಲಿದೆ.

ಹಾಗಾಗಿ ಯಾವುದಾದ್ರೂ ವಾಹನ ಹರಿದ್ರೆ ಹೆಬ್ಬಾವಿನ ಸಾವು ನಿಶ್ಚಿತ ಅಂತಾ ಮ್ಯಾಥ್ಯೂ ಬೇಗರ್ ಗೆ ಅನಿಸಿತ್ತು. ಹಾವು ಮಲಗಿದ್ದ Mof ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹಾಗಾಗಿ ಹಾವನ್ನು ರಕ್ಷಿಸುವ ಸಲುವಾಗಿ, ಅದು ಅಲ್ಲಿಂದ ಎದ್ದು ಹೋಗುವವರೆಗೂ ತಾನು ಕೂಡ ರಸ್ತೆಯಲ್ಲಿ ಮಲಗಿಯೇ ಇದ್ದ.

ಹೆಬ್ಬಾವಿನ ಪಕ್ಕ ಮ್ಯಾಥ್ಯೂ ಮಲಗಿರೋ ಫೋಟೋವನ್ನು ಫೇಸ್ಬುಕ್ ಗೆ ಹಾಕಲಾಗಿದೆ. ಮ್ಯಾಥ್ಯೂ ಮಾಡಿರೋ ಸಾಹಸ ಹಾಗೂ ಸಾಮಾಜಿಕ ಕಳಕಳಿ ನಿಜಕ್ಕೂ ಗ್ರೇಟ್ ಅಂತಾ ಎಲ್ಲರೂ ಕಮೆಂಟ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...