alex Certify
ಕನ್ನಡ ದುನಿಯಾ       Mobile App
       

Kannada Duniya

ಡೇಟಿಂಗ್ ಮಾಡಬಯಸುವವರು ಮಿಸ್ ಮಾಡ್ದೆ ಓದಿ ಈ ಸುದ್ದಿ

ಇತ್ತೀಚಿನ ವರ್ಷಗಳಲ್ಲಿ, ಡೇಟಿಂಗ್ ಆಪ್‌ಗಳು ಸಂಬಂಧಗಳ ಆಯಾಮಗಳನ್ನೇ ಸಂಪೂರ್ಣವಾಗಿ ಬದಲಾಯಿಸಿವೆ. ಇಂದು ಹುಡುಗ ಮತ್ತು ಹುಡುಗಿ ತಮ್ಮ ಫೋನ್ ಮೂಲಕ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಸಾಧಿಸಬಹುದಾಗಿದೆ. ಹೊಂದಾಣಿಕೆಗಾಗಿ ಅವರು ಡೇಟ್ ಹೋಗಬಹುದಾಗಿದೆ ಮತ್ತು ತಾವೇ ಆಯ್ಕೆ ಮಾಡಿದವರೊಂದಿಗೆ ಖುಷಿಯಿಂದ ಬಾಳಬಹುದಾಗಿದೆ.

ಆದಾಗ್ಯೂ, ಈ ಡೇಟಿಂಗ್ ಆಪ್‌ಗಳಿಗೊಂದು ಕರಾಳ ಮುಖವಿದೆ. ಯಾವಾಗಲೂ ಬಳಕೆದಾರರು ಅಂದುಕೊಂಡಂತೆ ಆಗುವುದಿಲ್ಲ. ಆಸ್ಟ್ರೇಲಿಯಾದ ಮೆಲ್ಬೋರ್ನ್‌ನ ಅಲಿತಾ ಬ್ರೈಡೋನ್‌ ಡೇಟಿಂಗ್ ವೆಬ್‌ಸೈಟ್ ಟಿಂಡರ್ ಮೂಲಕ ಸಂಬಂಧ ಬೆಳೆಸುವ ಕನಸು ಕಟ್ಟಿಕೊಂಡಿದ್ದಳು. ಆದರೆ ಒಂದು ದಿನ ಆತನ ಗರ್ಲ್‌ಫ್ರೆಂಡ್‌ ಈಕೆಗೆ ಕಳುಹಿಸಿದ ಮೆಸೇಜ್ ಅವರಿಬ್ಬರ ಸಂಬಂಧವನ್ನು ಕೊನೆಗಾಣಿಸಿತು.

ಅಲಿತಾಳ ಈ ಟಿಂಡರ್ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಹಿಳೆಯರ ಲೈಫ್‌ಸ್ಟೈಲ್ ವೆಬ್‌ಸೈಟ್, ಮಾಮಾಮಿಯಾದಲ್ಲಿ ಅಲಿತಾ ತನ್ನ ಡೇಟಿಂಗ್ ಕಥೆ ಬರೆದುಕೊಂಡಿದ್ದಾಳೆ.

ನಾನು ಟಿಂಡರ್ ಆಪ್ ಮೂಲಕ ಪರಿಚಯವಾದ ಆತನೊಂದಿಗೆ ನಿತ್ಯ ಆತ್ಮೀಯ, ಸಲಿಗೆಯ ಸಂದೇಶ ವಿನಿಮಯ ಮಾಡುತ್ತಿದ್ದೆ. ಒಂದು ಬಾರಿ ಹೊರಗಡೆ ಮಳಿಗೆಯೊಂದರಲ್ಲಿ ಭೇಟಿಯಾಗಿದ್ದೆ, ಆತ ನನ್ನ ತುಟಿಗೆ ತುಟಿಯೊತ್ತಿ ಸಿಹಿಮುತ್ತು ನೀಡಿದ್ದ. ಆದರೆ ಮಾರನೇ ದಿನ ನನ್ನ ಫೋನ್‌ಗೆ ಒಂದು ಸಂದೇಶ ಬಂತು, “ನನ್ನ ಬಾಯ್‌ಫ್ರೆಂಡ್‌ನಿಂದ ದೂರ ಇರು.”

ಅಲಿತಾಳ ಈ ಕಥೆ ಡೇಟಿಂಗ್ ತಾಣಗಳ ನಂಬಿ ಹೋಗುವವರಿಗೆ ಎಚ್ಚರಿಕೆಯ ಪಾಠವಾಗಿದೆ. ಮಹಿಳೆಯರೇ, ಜಾಲತಾಣಗಳಲ್ಲಿ ಪರಿಚಿತರಾಗುವ ಪುರುಷರ ಬಗ್ಗೆ ಎಚ್ಚರಿಕೆಯಿಂದಿರಿ. ಪೂರ್ವಾಪರ ಸರಿಯಾಗಿ ತಿಳಿದುಕೊಂಡು ಮುಂದಡಿಯಿಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...