alex Certify
ಕನ್ನಡ ದುನಿಯಾ       Mobile App
       

Kannada Duniya

ಇದನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ ಅಂದ್ರೇ ನೀವು ನಂಬಲೇಬೇಕು !!

cakeಮನುಷ್ಯನ ತಲೆಯ ಅಕೃತಿ ಟ್ರೇ ನಲ್ಲಿದೆ. ಅದರ ಮುಖ ಭಾಗವನ್ನು ಕತ್ತರಿಸಲಾಗಿದ್ದು, ಟ್ರೇ ತುಂಬೆಲ್ಲಾ ರಕ್ತ ಚೆಲ್ಲಾಡಿದಂತೆ ಕಾಣುತ್ತಿದೆ. ಜನ ಇದನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ ಅಂದ್ರೇ ನೀವು ನಂಬಲೇಬೇಕು.

ಯಸ್. ನಾವು ಹೇಳ್ತಿರೋದು ನಿಜ. ಅಂದ ಹಾಗೇ ಇದು ನಿಜವಾದ ಮನುಷ್ಯನ ತಲೆಯಲ್ಲ. ಮನುಷ್ಯನ ಅಕೃತಿಯಲ್ಲಿರುವ ಕೇಕ್. ನಿಪುಣ ಕಲಾವಿದೆಯೊಬ್ಬಳು ಈ ರೀತಿ ಕಲಾಕೃತಿಯ ಕೇಕ್ ಗಳನ್ನು ತಯಾರಿಸುತ್ತಿದ್ದು, ಅದಕ್ಕೆ ಭಾರೀ ಡಿಮ್ಯಾಂಡ್ ಇದೆ. ಕೆಲವರು ನೋಡುತ್ತಿದ್ದಂತೆಯೇ ಅಸಹ್ಯಪಟ್ಟುಕೊಳ್ಳುತ್ತಾರಾದರೂ ರುಚಿ ನೋಡುತ್ತಿದ್ದಂತೆಯೇ ಚಪ್ಪರಿಸಿಕೊಂಡು ತಿನ್ನುತ್ತಾರೆ.

ನ್ಯೂಯಾರ್ಕಿನ ಕ್ಯಾಥರೀನ್ ಡೇ ಎಂಬಾಕೆ ಈ ರೀತಿಯ ಕೇಕ್ ಗಳನ್ನು ತಯಾರಿಸುವುದರಲ್ಲಿ ಸಿದ್ದಹಸ್ತಳು. ವಿವಿಧ ಪ್ರಾಣಿ, ಪಕ್ಷಿಗಳು, ಹೃದಯ, ಭ್ರೂಣ ಹೀಗೆ ನೈಜವೆಂಬಂತೆ ಭಾಸವಾಗುವ ಕೇಕ್ ತಯಾರಿಸುವ ಈಕೆ ಇದನ್ನು ಕಲಿಸಲು ತರಬೇತಿ ಶಾಲೆಯನ್ನೂ ತೆರೆದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...