alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿ: ಬ್ರೇಕಪ್ ಗೂ ಮುನ್ನ ಸಂದರ್ಶನ ನಡೆಸಿದ ಯುವತಿ

ಸಾಮಾನ್ಯವಾಗಿ ಬ್ರೇಕಪ್ ಎಂದರೆ ಅತ್ತು ಕರೆದು, ಊಟ ಬಿಟ್ಟು ಖಿನ್ನತೆಗೆ ಹೋಗುತ್ತಾರೆ. ಆದರೆ ಇಲ್ಲೊಬ್ಬ ಯುವತಿ ‌ವಿಚಿತ್ರ ರೀತಿಯಲ್ಲಿ ಬ್ರೇಕಪ್ ಮಾಡಿಕೊಂಡು ನೆಟ್ಟಿಗರಿಗೆ ಸುದ್ದಿಯಾಗಿದ್ದಾಳೆ.

ಕ್ಯಾಟಿ ಎನ್ನುವ ಯುವತಿ ಡೇಟಿಂಗ್ ಬಳಿಕ‌ ತಾನು ಪ್ರೀತಿಸಿದ ಯುವಕನಿಂದ ದೂರವಾಗಿದ್ದು, ಎಕ್ಸಿಟ್ ಇಂಟರ್ ವ್ಯೂ‌(ನಿರ್ಗಮನ‌ ಸಂದರ್ಶನ) ಮಾಡಿದ್ದಾಳೆ. ಇದನ್ನು ಆತನ ಸ್ನೇಹಿತನೊಬ್ಬ ಟ್ವೀಟರ್ ನಲ್ಲಿ ಹಾಕಿಕೊಂಡಿರುವುದು ಇದೀಗ ವೈರಲ್ ಆಗಿದೆ.

ಯುವಕನಿಗೆ “ನನ್ನಲ್ಲಿರುವ ಸಮಸ್ಯೆಯೇನು?”, ” ಕ್ಯಾಟಿಯಲ್ಲಿ‌ ಏನು ಬದಲಾವಣೆ ಬಯಸುತ್ತೀರಾ” ಎನ್ನುವ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದು, ಕೆಲವು ರಚನಾತ್ಮಕ ಸಲಹೆಗಳನ್ನು ನೀಡುವಂತೆ ಸಂದೇಶದಲ್ಲಿ ಹೇಳಿದ್ದಾಳೆ ಎಂದು ತಿಳಿದುಬಂದಿದೆ.

ಕ್ಯಾಟಿಯ ಈ ಕ್ರಮವನ್ನು ನೆಟ್ಟಿಗರು ಸ್ವಾಗತಿಸಿದ್ದು, ಈ ರೀತಿಯ ಬೆಳವಣಿಗೆಯಿಂದ ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ. ಈ ರೀತಿಯಲ್ಲಿಯೂ‌ ಬ್ರೇಕಪ್ ಮಾಡಿಕೊಳ್ಳಬಹುದು ಎಂದು ಕ್ಯಾಟಿ ತೋರಿಸಿದ್ದಾಳೆ ಎಂದು ಪ್ರತಿಕ್ರಿಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...