alex Certify
ಕನ್ನಡ ದುನಿಯಾ       Mobile App
       

Kannada Duniya

ಭಯ ಹುಟ್ಟಿಸುವ ಗೊಂಬೆ ಮೇಲೆ ಈಕೆಗೆ ಪ್ರೀತಿ

ಬಾಳ ಸಂಗಾತಿ ಹೀಗಿರಬೇಕೆಂದು ಸಾಮಾನ್ಯವಾಗಿ ಎಲ್ಲರೂ ಕನಸು ಕಾಣ್ತಾರೆ. ಕೆಲವರಿಗೆ ಅವ್ರು ಬಯಸಿದಂತ ಸಂಗಾತಿ ಸಿಗ್ತಾರೆ. ಮತ್ತೆ ಕೆಲವರು ಸಂಗಾತಿ ಬಗ್ಗೆ ಕನಸು ಕಾಣುವುದಿಲ್ಲ. ಸಿಕ್ಕವರನ್ನೇ ಪ್ರೀತಿಸಲು ಶುರು ಮಾಡ್ತಾರೆ. ಆದ್ರೆ ಈ ಹುಡುಗಿ ಮಾತನಾಡದ, ಯಾವುದಕ್ಕೂ ಪ್ರತಿಕ್ರಿಯೆ ನೀಡದ ಗೊಂಬೆಯನ್ನು ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಾಳೆ. ಈ ಗೊಂಬೆ ನೋಡಲು ಸುಂದರವಾಗಿಲ್ಲ. ಭಯ ಹುಟ್ಟಿಸುವಂತಹ ಗೊಂಬೆಯನ್ನು ಈಕೆ ಪ್ರೀತಿ ಮಾಡ್ತಿದ್ದಾಳೆ.

ಕಳೆದ ಮೂರು ವರ್ಷಗಳಿಂದ ಬೊಂಬೆ ಪ್ರೀತಿಗೆ ಬಿದ್ದಿರುವ ಹುಡುಗಿ ಹೆಸ್ರು ಫೆಲಿಸಿಟ್ ಕ್ಯಾಡೆಲೆಕ್. ಗೊಂಬೆ ಹೆಸ್ರು ಕ್ಯಾಲಿ. ಅಮೆರಿಕಾದ ಮೆಸಾಚುಸೆಟ್ಸ್ ನಿವಾಸಿಯಿವಳು. ಈಕೆಗೆ ಈಗ 19 ವರ್ಷ. ಫೆಲಿಸಿಟ್ 13 ವರ್ಷದಲ್ಲಿರುವಾಗ ಈ ಗೊಂಬೆ ಉಡುಗೊರೆ ರೂಪದಲ್ಲಿ ಸಿಕ್ಕಿತ್ತಂತೆ. ಆರಂಭದಲ್ಲಿ ಗೊಂಬೆ ಮೇಲೆ ಆಕರ್ಷಣೆಯಿರಲಿಲ್ಲ. ಮೂರು ವರ್ಷಗಳ ಹಿಂದೆ ಪ್ರೀತಿ ಶುರುವಾಗಿದೆ ಎನ್ನುತ್ತಾಳೆ ಫೆಲಿಸಿಟ್.

ಆಕೆಗೆ ಒಬ್ಬ ಬಾಯ್ ಫ್ರೆಂಡ್ ಇದ್ದನಂತೆ. ಕೆಲ ದಿನಗಳ ಹಿಂದೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯವುಂಟಾಗಿ ಇಬ್ಬರೂ ಬೇರೆಯಾಗಿದ್ದಾರಂತೆ. ಈಗ ಗೊಂಬೆಯೇ ನನ್ನ ಸರ್ವಸ್ವ ಎನ್ನುತ್ತಾಳೆ ಫೆಲಿಸಿಟ್. ಕ್ಯಾಲಿ ಹೆಸರಿನ ಹಚ್ಚೆ ಹಾಕಿಸಿಕೊಂಡಿರುವ ಫೆಲಿಸಿಟ್, ನಮ್ಮಿಬ್ಬರ ಮಧ್ಯೆಯಿರುವ ಪ್ರೀತಿ ಯಾರಿಗೂ ಅರ್ಥವಾಗುವುದಿಲ್ಲ ಎಂದಿದ್ದಾಳೆ. ಸೆಪ್ಟೆಂಬರ್ ನಲ್ಲಿ ಈ ಗೊಂಬೆಯನ್ನು ಫೆಲಿಸಿಟ್ ಮದುವೆಯಾಗಲಿದ್ದಾಳಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...