alex Certify
ಕನ್ನಡ ದುನಿಯಾ       Mobile App
       

Kannada Duniya

9 ವರ್ಷಗಳಿಂದ ಗರ್ಭಿಣಿಯಾಗಿದ್ರೂ ಮಕ್ಕಳ ಭಾಗ್ಯವಿಲ್ಲ

ಮಹಿಳೆಗೆ ಗರ್ಭ ಧರಿಸುವುದು ಹೆಮ್ಮೆಯ ವಿಷಯ. ಅದ್ರಲ್ಲೂ 9ನೇ ತಿಂಗಳು ವಿಶೇಷವಾಗಿರುತ್ತದೆ. ಹೊರಗೆ ಬರಲಿರುವ ಮಗುವಿನ ಮುಖ ನೋಡುವ ಆಸೆ ಹೆಮ್ಮರವಾಗಿರುತ್ತದೆ. ಯಾವಾಗ ಮಗು ಹೊರಗೆ ಬರುತ್ತೆ ಎಂದು ಕಾಯುವ ಮಹಿಳೆಯರ ಸಂಖ್ಯೆಯೇ ಹೆಚ್ಚು. ಆದ್ರೆ ಯುಕೆಯಲ್ಲಿ ಮಹಿಳೆಯೊಬ್ಬಳು 9 ತಿಂಗಳಲ್ಲ 9 ವರ್ಷಗಳಿಂದ ಗರ್ಭಿಣಿಯಾಗಿದ್ದಾಳೆ.

ಬೆಲ್ಲೆ ರೊಮೈನ್ ಹೆಸರಿನ ಮಹಿಳೆ ನೋಡಿದ ಎಲ್ಲರೂ ಗರ್ಭಿಣಿ ಎಂದುಕೊಳ್ಳುತ್ತಾರೆ. ಆದ್ರೆ ಬೆಲ್ಲೆ ಗರ್ಭಿಣಿಯಲ್ಲ. 9 ತಿಂಗಳಿನಂತೆ ಕಾಣುವಷ್ಟು ಹೊಟ್ಟೆ ಬಂದಿರುವ ಬೆಲ್ಲೆ ಫೈಬ್ರೋಡ್ಸ್ ನಿಂದ ಬಳಲುತ್ತಿದ್ದಾಳೆ. ಈ ಸಮಸ್ಯೆ ಕಾಡುವ ಮಹಿಳೆಯರ ಹೊಟ್ಟೆ ದೊಡ್ಡದಾಗುತ್ತ ಹೋಗುತ್ತದೆ.

ಮಹಿಳೆ ವೈದ್ಯರ ಬಳಿ ಸಲಹೆ, ಚಿಕಿತ್ಸೆ ಕೂಡ ಪಡೆದಿದ್ದಾಳೆ. ಆದ್ರೆ ಶಸ್ತ್ರಚಿಕಿತ್ಸೆ ಮೂಲಕ ಗರ್ಭಾಶಯ ತೆಗೆಯಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಗರ್ಭಾಶಯ ತೆಗೆಸಿಕೊಳ್ಳಲು ಬೆಲ್ಲೆಗೆ ಮನಸ್ಸಿಲ್ಲ. ಹಾಗಾಗಿ ಬೇರೆ ಚಿಕಿತ್ಸೆ ಹುಡುಕಾಟದಲ್ಲಿದ್ದಾಳೆ. ಈ ಮಧ್ಯೆ ಆಕೆ ಎಂಗೇಜ್ಮೆಂಟ್ ಮುರಿದು ಬಿದ್ದಿದ್ದು, ತಾಯಿಯಾಗುವ ಆಸೆ ಕಮರುತ್ತಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...