alex Certify
ಕನ್ನಡ ದುನಿಯಾ       Mobile App
       

Kannada Duniya

ಮಗು ಹುಟ್ಟಿದ ಮೇಲೆ ಯುವತಿಗೆ ಗೊತ್ತಾಯ್ತು ಈ ಸತ್ಯ

ತಾಯ್ತನ ಅನ್ನೋದು ಒಂದು ಸುಂದರ ಅನುಭವ. ಗರ್ಭವತಿಯಾಗಿದ್ದಾಗ್ಲೂ ಮಹಿಳೆಯರು ವಿಶೇಷ ಅನುಭೂತಿ ಪಡೆಯುತ್ತಾರೆ. ಆದ್ರೆ ಈ ತಾಯಿಗೆ ಗರ್ಭಿಣಿಯಾಗಿದ್ದಾಗ ಅನುಭವಿಸೋ ಸಂತಸ, ಕುತೂಹಲ ಯಾವುದೂ ದಕ್ಕಿಲ್ಲ.

ಯಾಕಂದ್ರೆ ಮಗು ಹುಟ್ಟುವವರೆಗೂ ತಾನು ಗರ್ಭಿಣಿ ಅನ್ನೋದೇ ಅವಳಿಗೆ ಗೊತ್ತಿರಲಿಲ್ಲ. ಚಾರ್ಲೊಟ್ ಥಾಮ್ಸನ್ ಎಂಬಾಕೆ ನ್ಯೂಕೆಸಲ್ ನಿವಾಸಿ. ಆಕೆಗೆ ಸಹಜವಾಗಿಯೇ ಯಾವಾಗಿನಂತೆ ಪ್ರತಿ ತಿಂಗಳು ಋತುಸ್ರಾವವಾಗುತ್ತಿತ್ತು. ಹೊಟ್ಟೆ ಕೂಡ ಉಬ್ಬಿರಲಿಲ್ಲ.

ಒಮ್ಮೆ ಇದ್ದಕ್ಕಿದ್ದಂತೆ ತೀವ್ರ ಹೊಟ್ಟೆನೋವು ಶುರುವಾಗಿತ್ತು. ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದಾಗ ಚಾರ್ಲೊಟ್ ಗೆ ತಾನು ಗರ್ಭಿಣಿ ಅನ್ನೋದು ಗೊತ್ತಾಗಿದೆ. 19ರ ಹರೆಯದ ಚಾರ್ಲೊಟ್ ಗೆ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದೆ.

ಸಹಜವಾಗಿ ಎಲ್ಲಾ ಯುವತಿಯರಂತೆ ಚಾರ್ಲೊಟ್ ಕೂಡ ಪಾರ್ಟಿ ಮಾಡುತ್ತಿದ್ಲು. ಟೈಟ್ ಫಿಟ್ಟಿಂಗ್ ಡ್ರೆಸ್ ಧರಿಸುತ್ತಿದ್ರು. ಕೆಲದಿನಗಳಿಂದ ತೂಕ ಕೊಂಚ ಹೆಚ್ಚಾದಂತೆ, ಹೆಚ್ಹೆಚ್ಚು ನಿದ್ರೆ ಬರುತ್ತಿರುವಂತೆ ಆಕೆಗೆ ಅನಿಸಿತ್ತಂತೆ. ಆದ್ರೆ ತಾನು ಗರ್ಭಿಣಿ ಅನ್ನೋ ಯಾವ ಸುಳಿವೂ ಅವಳಿಗೆ ಸಿಕ್ಕಿರಲಿಲ್ಲ.

ಗರ್ಭಿಣಿಯಾದಾಗಿನಿಂದ್ಲೂ ಚಾರ್ಲೊಟ್ ಆಗಾಗ ಮದ್ಯ ಸೇವನೆ ಮಾಡಿದ್ದಾಳೆ. ಆದರೂ ಮಗುವಿಗೆ ಏನೂ ಅಪಾಯವಾಗಿಲ್ಲ. ಇನ್ನು ಮಗುವಿನ ಹುಟ್ಟಿಗೆ ಕಾರಣನಾದ ವ್ಯಕ್ತಿ ಈಗ ಮಾಜಿ ಪ್ರೇಮಿಯಾಗಿದ್ದಾನೆ. ಆತ ಚಾರ್ಲೊಟ್ ಜೊತೆಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...