alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ರಾಷ್ಟ್ರಗೀತೆಗೆ ಐಶ್ವರ್ಯ ರೈ ಪ್ರತಿಕ್ರಿಯೆ

ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ನುಡಿಸುತ್ತಿದ್ದಂತೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಎಮೋಶನಲ್ ಆಗಿಬಿಟ್ಟರು. ಕಣ್ಣುಗಳೆಲ್ಲಾ ತೇವಗೊಂಡವು.

ತಮ್ಮ ಭಾವನೆಗಳನ್ನು ಮುಚ್ಚಿಡಲು ಯತ್ನಿಸಿದ ಐಶ್ವರ್ಯಾ ಕಣ್ಣಿನಿಂದ ಜಾರಿದ ಹನಿಯನ್ನು ಒರೆಸಿಕೊಂಡರು. ಈ ಭಾವನಾತ್ಮಕ ಕ್ಷಣವನ್ನು ಕ್ಯಾಮರಾ ಕಣ್ಣುಗಳು ಸೆರೆ ಹಿಡಿದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಐಎಂಸಿಡಬ್ಲ್ಯೂಇ ಎಕ್ಸಿಬಿಶನ್ 2018 ಕಾರ್ಯಕ್ರಮ ಅದಾಗಿತ್ತು. ಶಬಾನಾ ಅಜ್ಮಿ, ಸೋನು ನಿಗಮ್‌ರಂತಹ ಬಾಲಿವುಡ್ ಸೆಲೆಬ್ರಿಟಿಗಳೂ ವೇದಿಕೆಯಲ್ಲಿ ಐಶ್ವರ್ಯಾ ಜತೆಗಿದ್ದರು. ಈ ಕಾರ್ಯಕ್ರಮದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಮೆರಿಲ್ ಸ್ಟ್ರೀಪ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಐಶ್ವರ್ಯಾ ಅವರಷ್ಟೇ ಅಲ್ಲ, ಚಿತ್ರ ನಿರ್ದೇಶಕ ಝೋಯಾ ಅಖ್ತರ್, ಶ್ರೀದೇವಿ ಕಪೂರ್ ಅವರ ಪುತ್ರಿ ಜಾಹ್ನವಿ ಕಪೂರ್ ಅವರಿಗೂ ಇದೇ ವೇಳೆ ಪ್ರಶಸ್ತಿ ನೀಡಲಾಯಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...