alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಸರು ಬದಲಾಯಿಸಿಕೊಂಡವನಿಗೆ ಸಿಕ್ತು ಉಚಿತ ಐಫೋನ್

man-changes-name-to-iphone-7-759ಉಕ್ರೇನ್ ನ ಮೊಬೈಲ್ ಮಾರಾಟ ಕಂಪನಿಯೊಂದು ಹೆಸರು ಬದಲಾಯಿಸಿಕೊಂಡವರಿಗೆ ಉಚಿತ ಐಫೋನ್ 7 ಕೊಡುಗೆಯಾಗಿ ನೀಡುವುದಾಗಿ ಘೋಷಿಸಿತ್ತು. ಇದಕ್ಕೆ ಕೆಲವೊಂದು ಶರತ್ತನ್ನು ವಿಧಿಸಿದ್ದು, ಇದನ್ನು ಪೂರ್ಣಗೊಳಿಸಿದ ಯುವಕನೊಬ್ಬ ಈಗ ದುಬಾರಿ ಬೆಲೆಯ ಐಫೋನ್ ಪಡೆದುಕೊಂಡಿದ್ದಾನೆ.

20 ವರ್ಷದ Olexander Turin ಇದೀಗ ತನ್ನ ಹೆಸರನ್ನು “iPhone Sim (Seven)” ಎಂದು ಬದಲಾಯಿಸಿಕೊಂಡಿದ್ದಾನೆ. ಇದಕ್ಕಾಗಿ ಆತ 2 ಡಾಲರ್ ಖರ್ಚು ಮಾಡಿದ್ದು, 850 ಡಾಲರ್ ಮೌಲ್ಯದ ಐಫೋನ್ 7 ಅನ್ನು ಉಚಿತವಾಗಿ ಪಡೆದುಕೊಂಡಿದ್ದಾನೆ.

ಕಂಪನಿ ನಿಯಮದಂತೆ ಮೊದಲ ಹೆಸರು ಐಫೋನ್ ಹಾಗೂ ಕೊನೆಯ ಹೆಸರು ಸೆವೆನ್ ಎಂದಿರಬೇಕಿತ್ತು. ಈ ಪ್ರಕಾರ ತನ್ನ ಹೆಸರನ್ನು ಬದಲಾಯಿಸಿಕೊಂಡ ಯುವಕ, ಐಫೋನ್ ಪಡೆದುಕೊಂಡಿದ್ದಾನೆ. ಈತ, ತನ್ನ ಹೆಸರು ಬದಲಾಯಿಸಿಕೊಂಡಿರುವುದಕ್ಕೆ ಆನೇಕರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಇಷ್ಟು ಕಾಲ ಒಂದು ಹೆಸರಿನಿಂದ ಗುರುತಿಸಿಕೊಂಡಿದ್ದವನು ಉಚಿತ ಫೋನ್ ಗಾಗಿ ಏಕಾಏಕಿ ಹೆಸರು ಬದಲಾಯಿಸಿಕೊಂಡಿರುವುದು ಅಚ್ಚರಿ ತಂದಿದೆ ಎಂದಿದ್ದಾರೆ. ಆದರೆ ಯುವಕನ ಕುಟುಂಬ ಹಾಗೂ ಸ್ನೇಹಿತರು ಆತನನ್ನು ಬೆಂಬಲಿಸಿದ್ದಾರೆ. ಹೆಸರು ಬದಲಾಯಿಸಿಕೊಳ್ಳುವ ಮೊದಲ 5 ಮಂದಿಗೆ ಉಚಿತ ಐಫೋನ್ 7 ನೀಡುವುದಾಗಿ ಕಂಪನಿ ಹೇಳಿದ್ದು, ವಿಜೇತರಾಗಿರುವ ಇತರರ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...