alex Certify
ಕನ್ನಡ ದುನಿಯಾ       Mobile App
       

Kannada Duniya

ಅಳುತ್ತಿದ್ದ ಬಾಲಕಿಗೆ ಜೈಲಿಗೆ ಕಳುಹಿಸುತ್ತೇನೆಂದ ನ್ಯಾಯಾಧೀಶ

ಲಂಡನ್: ನೀನು ಹೀಗೆಯೇ ಅಳುತ್ತಿದ್ದರೆ, ನಿನಗೆ ಚಿಕ್ಕ ವಯಸ್ಸು ಎಂದೂ ನೋಡದೇ ಜೈಲಿಗಟ್ಟುತ್ತೇನೆ. ಇದು 14 ವರ್ಷದ ಬಾಲಕಿಯೊಬ್ಬಳ ಮೇಲೆ ಇಂಗ್ಲೆಂಡ್ ನ ನ್ಯಾಯಾಧೀಶರೊಬ್ಬರು ಗುಡುಗಿದ ಪರಿ. ಇದಕ್ಕೆ ಹಲವು ನ್ಯಾಯಾಧೀಶರೂ ಸೇರಿ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಂದ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದೆ.

ಆಗಿದ್ದೇನು?: ಮೊಬೈಲ್, ಸಿಮ್ ಕಾರ್ಡ್ ಗಳು, ಚಾರ್ಜರ್ ಗಳನ್ನು ಕದಿಯುತ್ತಿದ್ದ ಆರೋಪದ ಮೇಲೆ ಬಂಧಿತಳಾಗಿದ್ದ ನತಾಶಾ ಮೈರ್ ಎಂಬಾಕೆಯ ವಿಚಾರಣೆ ವೇಳೆ ಈ ಘಟನೆ ನಡೆದಿದೆ.

ಜಡ್ಜ್ ಸ್ಟೀಫನ್ ಜಾನ್ ಎಂಬುವರು ವಿಚಾರಣೆ ನಡೆಸುತ್ತಿದ್ದಾಗ ಆರೋಪಿಯ ಪುತ್ರಿ ಅಂಜಿಕೆಯಿಂದ ಅಳುತ್ತಿದ್ದಳು. ಇದರಿಂದ ಕೋಪಗೊಂಡ ಜಡ್ಜ್ ಈ ಮೇಲಿನ ಪ್ರತಿಕ್ರಿಯೆ ನೀಡಿದ್ದಾರೆ.
ಆದರೆ, ಈ ವಿಚಾರಣೆ ವೇಳೆಯ ಸಂಪೂರ್ಣ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಜಡ್ಜ್ ವರ್ತನೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನ್ಯಾಯಾಧೀಶರೊಬ್ಬರು, ತಾಯಿಯ ವಿಚಾರಣೆ ಕಂಡು ಆಕೆಗೆ ಅಳು ಬರುವುದು ಸಹಜ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...