alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನವತೆ ಮೆರೆದು ಮೆಚ್ಚುಗೆಗೆ ಪಾತ್ರವಾದ ಪ್ರವಾಸಿಗ

shoe touristಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಮಾನವತೆಗೆ ಸ್ಪಷ್ಟ ಉದಾಹರಣೆಯಾಗಿದೆ. ದಾರಿಹೋಕರೊಬ್ಬರು ತೆಗೆದಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರವಾಸಿ ಸ್ಥಳಗಳಲ್ಲಿ ನಿರ್ಗತಿಕರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ ಆಗಮಿಸುವ ಪ್ರವಾಸಿಗರ ಬಳಿ ಹಣ ಹಾಗೂ ಆಹಾರಕ್ಕಾಗಿ ಮುಗಿ ಬೀಳುತ್ತಾರೆ. ಇಂತಹ ಸಂದರ್ಭದಲ್ಲಿ ಪ್ರವಾಸಿಗರು ಕೈಲಾದಷ್ಟು ಹಣ ನೀಡಿ ಮುಂದೆ ತೆರಳುತ್ತಾರೆ.

ಆದರೆ ಈ ಪ್ರವಾಸಿಗ ಮಾಡಿರುವ ಕಾರ್ಯ ಮಾತ್ರ ಸ್ತುತ್ಯಾರ್ಹವಾದದ್ದು. ಬೀದಿ ಬದಿಯಲ್ಲಿ ಕುಳಿತಿದ್ದ ನಿರ್ಗತಿಕನೊಬ್ಬನನ್ನು ಕಂಡ ಈ ಪ್ರವಾಸಿಗನಿಗೆ ಅದೇನೆನ್ನಿಸಿತೋ ಏನೋ ತಾನು ಧರಿಸಿದ್ದ ಶೂ ಗಳನ್ನೆ ಆತನಿಗೆ ಬಿಚ್ಚಿ ಕೊಟ್ಟು ಮರು ಮಾತನಾಡದೆ ಬರಿಗಾಲಿನಲ್ಲಿ ಮುಂದೆ ಸಾಗಿದ್ದಾನೆ. ಇದನ್ನು ಕಂಡ ದಾರಿಹೋಕರೊಬ್ಬರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದು, ಪ್ರವಾಸಿಗ ತೋರಿದ ಮಾನವೀಯ ಗುಣಕ್ಕೆ ಆಪಾರ ಮೆಚ್ಚುಗೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...