alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರನ ಹೊತ್ತು 180 ಕಿಲೋ ಮೀಟರ್ ನಡೆದ ಸಾಹಸಿ

180 km us

ನಡೆದುಕೊಂಡು ದೂರದವರೆಗೂ ಹೋಗುವುದು ಕಷ್ಟದ ಕೆಲಸ. ಅಂತಹುದರಲ್ಲಿ ಸಹೋದರನನ್ನು ಹೊತ್ತುಕೊಂಡು ಬರೋಬ್ಬರಿ 111 ಮೈಲು(ಸುಮಾರು 180 ಕಿಲೋಮೀಟರ್) ನಡೆದ ಸಾಹಸಿಯೊಬ್ಬನ ಸ್ಟೋರಿ ಇಲ್ಲಿದೆ ನೋಡಿ.

ಹಂಟರ್ ಗ್ಯಾಂಡೈ ಎಂಬ 16 ವರ್ಷದ ಬಾಲಕ ತನ್ನ ಸಹೋದರನನ್ನು ಹೊತ್ತುಕೊಂಡು ಇಷ್ಟೊಂದು ದೂರದ ದಾರಿಯನ್ನು ಕ್ರಮಿಸಿದ್ದಾರೆ. ಆತನ ಸಹೋದರನಿಗೆ ಸೆರ್ರಿಬಲ್ ಪಾಲ್ಸ್ ಎಂಬ ಕಾಯಿಲೆ ಇದ್ದು, ಈ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಂಟರ್ ಹಿಂಬದಿಯಲ್ಲಿ ಸಹೋದರನನ್ನು ಕೂರಿಸಿಕೊಂಡು ಮಿಚುಗನ್ ನಿಂದ ಆರಂಭಿಸಿ ನಡೆದುಕೊಂಡೇ ದೂರದ ದಾರಿಯನ್ನು ಕ್ರಮಿಸಿದ್ದಾನೆ. ಈ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಬೇಕೆಂದು ವಾರ್ಷಿಕ ಯೋಜನೆ ಮಾಡಿಕೊಂಡಿದ್ದ ಹಂಟರ್ ಅದರಂತೆ ನಡಿಗೆ ಮುಗಿಸಿದ್ದಾನೆ.

ಏಪ್ರಿಲ್ 20 ರಿಂದ ಆರಂಭವಾಗಿ 25 ರವರೆಗೆ 5 ದಿನಗಳ ಕಾಲ ಸಹೋದರನನ್ನು ಹೊತ್ತುಕೊಂಡು 180 ಕಿಲೋ ಮೀಟರ್ ನಡಿಗೆ ಆರಂಭಿಸುವ ಬಗ್ಗೆ ಹಂಟರ್ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಹಾಕಿದ್ದು, ಅದನ್ನು ಅಪಾರ ಜನ ವೀಕ್ಷಿಸಿದ್ದಾರೆ.

Hunter posted on Instagram, saying:
“Me and this little man are starting a long journey tomorrow, please keep us in your prayers and come out to walk with us! #CPSWAG”

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...