alex Certify
ಕನ್ನಡ ದುನಿಯಾ       Mobile App
       

Kannada Duniya

ಮಲೇಷ್ಯಾ ಶಾಲೆಯಲ್ಲಿ ನಿರಂತರ ಗಾಂಧಿ ಧ್ಯಾನ

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಮಹಾತ್ಮ ಗಾಂಧಿ ಅವರ 150 ನೇ ಜನ್ಮದಿನಾಚರಣೆ ದೇಶದಲ್ಲಿ ಸಂಭ್ರಮದಿಂದ ನಡೆಯುತ್ತಿದ್ದರೆ, ಅತ್ತ ಮಲೇಷ್ಯಾದ ಶಾಲೆಯೊಂದರಲ್ಲಿ ನಿತ್ಯ ನೆನೆಯುವ ಕೆಲಸವಾಗುತ್ತಿದೆ.

ಹೌದು, ಮಲೇಷ್ಯಾ ಸ್ವಾತಂತ್ರ್ಯ ಹೋರಾಟಗಾರ‌‌ ವಿ.ಟಿ. ಸಾಂಭನಾಥನ್ ಅವರು 1954ರಲ್ಲಿ ಆರಂಭಿಸಿದ ಮಹಾತ್ಮ‌ಗಾಂಧಿ ಕಲಾಶಾಲೈಯಲ್ಲಿ,‌ ಕಳೆದ ಆರು ದಶಕದಿಂದ ಗಾಂಧಿ ಅವರ ಸ್ಮರಣೆ ಮಾಡುತ್ತ ಬಂದಿದ್ದೂ, ಪ್ರತಿನಿತ್ಯ ಗಾಂಧೀಜಿಯ ತತ್ವ ಆದರ್ಶದ‌ ಪಾಠ ಮಾಡುವ ಕೆಲಸದಲ್ಲಿ ತೊಡಗಿದೆ.

ಶಾಲೆ ಪ್ರವೇಶಿಸುತ್ತಿದ್ದಂತೆ ಪ್ರಾಂಗಣದಲ್ಲಿ ಗಾಂಧೀಜಿ ಅವರ ಪ್ರತಿಮೆ ಕಾಣಬಹುದು. ಪ್ರಮುಖವಾಗಿ‌ ಭಾರತ ಮತ್ತು ಬ್ರಿಟಿಷ್ ಆಳ್ವಿಕೆಯ ಮಲಾಯ ಪ್ರಾಂತ್ಯದ ನಡುವಿನ ಸಂಬಂಧದ ಕುರುಹಾಗಿ‌ ಈ ಶಾಲೆ ನಿಂತಿದೆ. ಮಹಾತ್ಮ ಗಾಂಧಿ ಕಲಾಶಾಲೈ ಅನ್ನು ಯುಎನ್ ಸಂಸತ್ತಿನ ಮೊದಲ‌ ಮಹಿಳಾ‌ ಸದಸ್ಯೆ ವಿಜಯಲಕ್ಷ್ಮೀ ಪಂಡಿತ್ ಉದ್ಘಾಟಿಸಿದ್ದರು.

ಈ ಶಾಲೆಯನ್ನು‌ ಗಾಂಧೀಜಿ ಅವರ‌ ಹೆಸರಲ್ಲಿ ಕಟ್ಟಲು ಸ್ಥಳೀಯರು 1951ರಲ್ಲಿ ನಿರ್ಧರಿಸಿದರು. ಆದರೆ ಸ್ಥಳೀಯ ಆಡಳಿತ ಮಂಡಳಿ ಇದಕ್ಕೆ ಯಾವುದೇ ಧನ ಸಹಾಯ ಮಾಡಿರಲಿಲ್ಲ. ಆದ್ದರಿಂದ ಈ ಭಾಗದಲ್ಲಿ ನೆಲೆಸಿದ್ದ ಭಾರತೀಯರೇ ಹಣ‌ ಸಂಗ್ರಹಿಸಿ, ಶಾಲೆ ಕಟ್ಟಲು ಮುಂದಾದರು.

ಭಾರತದ ವೀರಸ್ವಾಮಿ ಹಾಗೂ ಸುಪ್ಪೈ ಪಿಳ್ಳೈ ಅವರು ತಮ್ಮ ಎರಡು ಎಕರೆ ಜಮೀನನ್ನು ಶಾಲೆಗೆ ದೇಣಿಗೆ ರೂಪದಲ್ಲಿ ನೀಡಿದ್ದರು. 1964ರಲ್ಲಿ ಆರಂಭಗೊಂಡ ಈ ಶಾಲೆಯಲ್ಲಿ ಸದ್ಯ ‌600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಆಡಳಿತ ಮಂಡಳಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...