alex Certify
ಕನ್ನಡ ದುನಿಯಾ       Mobile App
       

Kannada Duniya

150 ವರ್ಷ ಆಯುಷ್ಯ ನೀಡುತ್ತೆ ಈ ಮಾತ್ರೆ…!

ಯೌವನ, ಸೌಂದರ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ನಾವು ಅದೆಷ್ಟು ಮಾತ್ರೆಗಳು, ಕ್ರೀಮ್‌ಗಳು ಇತ್ಯಾದಿ ಸೌಂದರ್ಯವರ್ಧಕಗಳ ಮೊರೆ ಹೋಗುತ್ತಿಲ್ಲ ಹೇಳಿ. ಆದರೆ ಇದ್ಯಾವುದೂ ಮುಪ್ಪಾಗುವಿಕೆಯನ್ನು ತಡೆಯುವ ಅಥವಾ ನಿಧಾನಗೊಳಿಸುವ ಕೆಲಸ ಮಾಡುವುದಿಲ್ಲ. ಚಿರ ಯೌವನವನ್ನು ಕಾಪಾಡಿಕೊಳ್ಳುವಂತ ಶಕ್ತಿಮದ್ದು ಕನಸಾಗಿಯೇ ಉಳಿದಿತ್ತು. ನೀವು ನಂಬ್ತೀರೋ, ಬಿಡ್ತೀರೋ, ಚಿರಯೌವನ ನೀಡುವ ಮಾತ್ರೆಯೊಂದು ಬರುತ್ತಿದೆ.

ನ್ಯೂ ಸೌತ್ ವೇಲ್ಸ್ ಯುನಿವರ್ಸಿಟಿಯ ಹಾರ್ವರ್ಡ್ ಪ್ರೊಫೆಸರ್ ಡೇವಿಡ್ ಸಿನ್‌ಕ್ಲೇರ್ ಹಾಗೂ ಅವರ ಸಂಶೋಧಕರ ತಂಡವು ಮಾನವರು 150 ವರ್ಷಗಳ ತನಕ ಜೀವಿಸಲು ಸಾಧ್ಯವಾಗುವಂತೆ ನಮ್ಮ ಜೀವಕೋಶಗಳನ್ನು ಮರು ಪ್ರೋಗ್ರಾಮಿಂಗ್ ಮಾಡುವ ಪ್ರಕ್ರಿಯೆನ್ನು ಅಭಿವೃದ್ಧಿಪಡಿಸಿದ್ದಾರೆ. 2020ರ ವೇಳೆಗೆ ಈ ಅಧ್ಯಯನ ಫಲ ನೀಡಲಿದೆ.

ಈ ತಂತ್ರವು ಮುಪ್ಪು ಸಂಬಂಧಿ ಸಮಸ್ಯೆಗಳನ್ನಷ್ಟೇ ನೀಗಿಸುವುದಿಲ್ಲ, ಪಾರ್ಶ್ವವಾಯುವಿನಿಂದ ಬಳಲುವವರಿಗೂ ತಮ್ಮ ಚೈತನ್ಯವನ್ನು ಮರು ಗಳಿಸಿಕೊಳ್ಳಲು ನೆರವಾಗಲಿದೆ. ಸುಲಭವಾಗಿ ಸಿಗಬಲ್ಲ, ಕೈಗೆಟಕುವ ದರದಲ್ಲಿ ಮಾತ್ರೆಗಳ ರೂಪದಲ್ಲಿ ಇದನ್ನು ಒದಗಿಸಲು ಈ ವಿಜ್ಞಾನಿಗಳ ತಂಡ ಪ್ರಯತ್ನಿಸುತ್ತಿದೆ. ನಿಕೋಟಿನಾಮೈಡ್ ಅಡೆನೈನ್ ಡೈನ್ಯೂಕ್ಲಿಯೋಟೈಡ್ (ಎನ್‌ಎಡಿ) ಎಂಬ ಮಾಲೆಕ್ಯೂಲ್ ಈ ಮಾತ್ರೆಯ ಹಿಂದಿನ ರಹಸ್ಯವಾಗಿದೆ. ಅನೇಕ ಲಾಭಗಳನ್ನು ತರುವ ಈ ಮಾತ್ರೆಯ ಸುರಕ್ಷತೆಯ ಕುರಿತು ಇನ್ನಷ್ಟೇ ಸಂಶೋಧನೆ ನಡೆಯಬೇಕಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...