alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಳ್ಳ ಬೆಕ್ಕಿನ ಕೃತ್ಯಕ್ಕೆ ಬಿದ್ದು ಬಿದ್ದು ನಗ್ತೀರಿ

Captured catನ್ಯೂಜಿಲ್ಯಾಂಡಿನ ಈ ಕಳ್ಳ ಬೆಕ್ಕು ಮಾಡಿರುವ ಕೆಲಸಕ್ಕೆ ಇದರ ಮಾಲಕಿ ತಲೆ ತಗ್ಗಿಸುವಂತಾಗಿದ್ದರೆ, ವಿಷಯ ಕೇಳಿದವರು ಮಾತ್ರ ಬಿದ್ದು ಬಿದ್ದು ನಗ್ತಿದ್ದಾರೆ. ತಾನು ಸಾಕಿರುವ ಹೆಣ್ಣು ಬೆಕ್ಕು ಮಾಡುತ್ತಿರುವ ಕಳ್ಳತನಕ್ಕೆ ಅದರ ಮಾಲಕಿ ಸಾರಾ ಕ್ಷಮೆ ಯಾಚಿಸಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಈ ಬೆಕ್ಕು ರಾತ್ರಿ ವೇಳೆ ಅಕ್ಕ ಪಕ್ಕದ ನಿವಾಸಿಗಳ ಪುರುಷರ ಒಳ ಉಡುಪುಗಳು ಹಾಗೂ ಸಾಕ್ಸ್ ಗಳನ್ನು ಎತ್ತಿಕೊಂಡು ಬರುತ್ತಿದೆಯಂತೆ. ಮೊದಮೊದಲು ಇದನ್ನು ನಿರ್ಲಕ್ಷಿಸಿದ್ದ ಸಾರಾ ನಾಥನ್, ತನ್ನ ಮನೆಯಲ್ಲಿ ರಾಶಿಗಟ್ಟಲೆ ಪುರುಷರ ಒಳ ಉಡುಪುಗಳ ಬಿದ್ದಿರುವುದನ್ನು ಕಂಡು ಗಾಬರಿಯಾಗಿದ್ದಾರೆ. ಆ ರೀತಿ ಮಾಡದಂತೆ ತನ್ನ ಮುದ್ದಿನ ಬೆಕ್ಕಿಗೆ ತರಬೇತಿ ನೀಡಲೆತ್ನಿಸಿದರೂ ಅದು ತನ್ನ ಕಳ್ಳತನ ಮುಂದುವರೆಸಿದೆ.

ಇದೀಗ ಸಾರಾ ಬೇರೆಡೆ ಸ್ಥಳಾಂತರವಾಗುತ್ತಿದ್ದು, ತನ್ನ ಬೆಕ್ಕು ಮಾಡಿರುವ ಕಳ್ಳತನಕ್ಕೆ ಪ್ರಾಯಶ್ಚಿತವೆಂಬಂತೆ ಆದು ಕದ್ದು ತಂದಿರುವ ಒಳ ಉಡುಪುಗಳ ಹಾಗೂ ಸಾಕ್ಸ್ ಗಳ ಫೋಟೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿರುವುದಲ್ಲದೇ ಬೆಕ್ಕಿನ ಕೃತ್ಯಕ್ಕೆ ಕ್ಷಮೆ ಕೋರಿದ್ದಾರೆ. ಜೊತೆಗೆ ತಾನು ಊರು ಬಿಡುವುದರೊಳಗಾಗಿ ಒಳ ಉಡುಪು ಕಳೆದುಕೊಂಡಿರುವವರು ತಮ್ಮನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದೆಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...