alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ಕೆರೆಗೆ ಮೀನು ತೂರಿಬಿಡುವ ವಿಡಿಯೋ

ಇತ್ತೀಚೆಗೆ ಫೇಸ್ಬುಕ್ ನಲ್ಲಿ ವಿಡಿಯೋ ಒಂದು ತುಂಬಾನೇ ಸದ್ದು ಮಾಡ್ತಿದೆ. ಅಮೆರಿಕದ ಉತಾಹ್ ನಲ್ಲಿ ಮೀನು ಸಾಕಾಣೆಗೆ ಸಂಬಂಧಿಸಿದ ವಿಡಿಯೋ ಈಗ ಪರ-ವಿರೋಧದ ಚರ್ಚೆ ಹುಟ್ಟುಹಾಕಿದೆ. ಉತಾಹ್ ನಲ್ಲಿರುವ ಕೆರೆಯೊಂದಕ್ಕೆ ವಿಮಾನದ ಮೂಲಕ ಮೀನುಗಳನ್ನು ಹಾಕ್ತಿರೋ ವಿಡಿಯೋ ಈಗ ಎಲ್ಲರ ಕುತೂಹಲ ಕೆರಳಿಸಿದೆ.

ಉತಾಹ್ ನ ವನ್ಯಜೀವಿ ಸಂಪನ್ಮೂಲ ಇಲಾಖೆ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. ಆಗಸ್ಟ್ ಅಂತ್ಯದಲ್ಲಿ ಪೋಸ್ಟ್ ಆಗಿರುವ ಈ ವಿಡಿಯೋಗೆ ಅನೇಕರು ಬೆರಗಾಗಿದ್ದಾರೆ. ವಿಮಾನದ ಮೂಲಕ ಕೆರೆಗೆ ಹಾಕಿದ ಮೀನುಗಳು ಎಷ್ಟು ಸೇಫ್ ಆಗಿವೆ ಅನ್ನೋ ಪ್ರಶ್ನೆ ಎತ್ತಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ವನ್ಯಜೀವಿ ಇಲಾಖೆ, ಮೀನುಗಳು 1-3 ಇಂಚುಗಳಷ್ಟು ಉದ್ದವಿದೆ. ಮೀನುಗಳು ಕೆರೆಯ ಎಲ್ಲಾ ಭಾಗಗಳಿಗೂ ತಲುಪಬೇಕು ಅನ್ನೋ ಕಾರಣಕ್ಕೆ ಹೀಗೆ ಕೆರೆಗೆ ಬಿಡಲಾಗಿದೆ ಅನ್ನೋ ಸ್ಪಷ್ಟನೆಯನ್ನ ನೀಡಲಾಗಿದೆ. ಶೇಕಡಾ 95ರಷ್ಟು ಮೀನುಗಳು ಸುರಕ್ಷಿತವಾಗಿ ಕೆರೆ ತಲುಪಿವೆಯಂತೆ.

Aerial Fish Stocking in Utah

If you see flying fish at Utah's remote lakes, don't be alarmed! #FishFriday

Posted by Utah Division of Wildlife Resources on Friday, August 24, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...