alex Certify
ಕನ್ನಡ ದುನಿಯಾ       Mobile App
       

Kannada Duniya

ಮನ ಕಲಕುವಂತಿದೆ ಪಾಕ್ ಬಾಲಕಿಯ ಸ್ಥಿತಿ

9 ವರ್ಷದ ಈ ಪಾಕಿಸ್ತಾನದ ಬಾಲಕಿಗೆ ಪ್ರತಿಕ್ಷಣವೂ ನರಕಯಾತನೆ. ಇವಳ ತಲೆ 180 ಡಿಗ್ರಿಯಷ್ಟು ಬಾಗಿಕೊಂಡಿದ್ದು, ನೋವು ಅನುಭವಿಸುತ್ತಿದ್ದಾಳೆ. ಅಫ್ಸೀನ್ ಕುಂಬರ್ ಎಂಬ ಬಾಲಕಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದವಳು. ಸ್ನಾಯು ಸಮಸ್ಯೆಯಿಂದಾಗಿ ಸರಿಯಾಗಿ ನಡೆದಾಡಲು ಕೂಡ ಸಾಧ್ಯವಾಗುತ್ತಿಲ್ಲ.

ಏನಾದ್ರೂ ತಿನ್ನಬೇಕು ಅಂದ್ರೂ ಇತರರ ಸಹಾಯ ಬೇಕು, ಶೌಚಕ್ಕೆ ಕೂಡ ಒಬ್ಬಳೇ ಹೋಗಲು ಸಾಧ್ಯವಿಲ್ಲದಂಥ ಪರಿಸ್ಥಿತಿ. ಹೆತ್ತವರು ಹತ್ತಾರು ಆಸ್ಪತ್ರೆಗಳಿಗೆ ಅಲೆದಿದ್ದಾರೆ. ಆದ್ರೆ ಯಾವ ವೈದ್ಯರು ಕೂಡ ಚಿಕಿತ್ಸೆ ನೀಡಲು ಮುಂದಾಗಿಲ್ಲ. ತಜ್ಞರನ್ನು ಭೇಟಿ ಮಾಡಲು ಹಣವಿಲ್ಲ.

ಹುಟ್ಟುವಾಗ ಅಫ್ಸೀನ್ ಆರೋಗ್ಯವಾಗಿಯೇ ಇದ್ಲು. 8 ತಿಂಗಳ ಮಗುವಾಗಿದ್ದಾಗ ಅಪಘಾತವೊಂದರಲ್ಲಿ ಅವಳ ಕತ್ತು ಬಾಗಿಕೊಂಡಿತ್ತು. ಅಫ್ಸೀನ್ ಪೋಷಕರಿಗೆ ಒಟ್ಟು 7 ಮಕ್ಕಳಿದ್ದಾರೆ. ಕತ್ತು ಈ ರೀತಿ ಬಾಗಿಕೊಂಡಿರೋದ್ರಿಂದ ಅಫ್ಸೀನ್ ಶಾಲೆಗೆ ಕೂಡ ಹೋಗುತ್ತಿಲ್ಲ.

ಮಗಳು ಎಲ್ಲರಂತೆ ಸಹಜವಾಗಿ ಬದುಕುವಂತಾಗಲಿ ಅನ್ನೋದು ಹೆತ್ತವರ ಆಸೆ. ಆದ್ರೆ ಸೂಕ್ತ ಚಿಕಿತ್ಸೆ ಕೊಡಿಸುವಷ್ಟು ಶ್ರೀಮಂತಿಕೆ ಇಲ್ಲ. ಎರಡು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ಈ ಕುಟುಂಬ ದಾನಿಗಳಿಂದ ನೆರವಿನ ನಿರೀಕ್ಷೆಯಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...