alex Certify
ಕನ್ನಡ ದುನಿಯಾ       Mobile App
       

Kannada Duniya

1860ರಲ್ಲೇ ಇತ್ತಾ ಸ್ಮಾರ್ಟ್ ಫೋನ್? ಇಲ್ಲಿದೆ ನೋಡಿ ಸಾಕ್ಷ್ಯ….

ಕಾಡಿನ ಮಧ್ಯೆ ನಡೆದುಕೊಂಡು ಹೋಗ್ತಿರೋ ಚೆಲುವೆ. ಕೈಯ್ಯಲ್ಲಿ ಹೂವು ಹಿಡಿದು ಅವಳಿಗೆ ಪ್ರಪೋಸ್ ಮಾಡಲು ಕಾಯ್ತಾ ಇರೋ ಯುವಕ. ಆ ಹುಡುಗಿ ಕೈಯಲ್ಲಿ ಸ್ಮಾರ್ಟ್ ಫೋನ್ ನಂಥದ್ದೇ ವಸ್ತು. ಇದು 1860ರಲ್ಲಿ ಮಾಡಿದ ಪೇಂಟಿಂಗ್. ಆಸ್ಟ್ರಿಯಾದ ಕಲಾವಿದ ಫರ್ಡಿನ್ಯಾಂಡ್ ಜಾರ್ಜ್ ವಾಲ್ಡ್ಮುಲ್ಲರ್ ಈ ಚಿತ್ರವನ್ನು ಬಿಡಿಸಿದ್ದ.

ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಂದಿದ್ದು ಕೆಲವೇ ವರ್ಷಗಳ ಹಿಂದೆ. ಆದ್ರೆ ಈ ಫೋಟೋ ನೋಡಿದ್ರೆ. ಶತಮಾನದ ಹಿಂದೆಯೇ ಸ್ಮಾರ್ಟ್ ಫೋನ್ ಇತ್ತಾ ಅನ್ನೋ ಅನುಮಾನ ಮೂಡಿದೆ. 157 ವರ್ಷಗಳ ಕಾಲ ಯಾರೂ ಗಮನಿಸದ ಸಂಗತಿಯನ್ನು ಗ್ಲಾಸ್ಗೋದ ನಿವೃತ್ತ ಅಧಿಕಾರಿ ಪೀಟರ್ ರಸೆಲ್ ಪತ್ತೆ ಮಾಡಿದ್ದಾರೆ.

ಆದ್ರೆ ಯುವತಿಯ ಕೈಯಲ್ಲಿದ್ದಿದ್ದು ಮೊಬೈಲ್ ಅಲ್ಲ, ಪ್ರಾರ್ಥನೆಯ ಪುಸ್ತಕ ಅನ್ನೋ ವಾದ ಕೂಡ ಕೇಳಿ ಬಂದಿದೆ. ದೇವರ ನಾಮ ಸ್ತುತಿಸುತ್ತ ಬರ್ತಾ ಇದ್ದ ಯುವತಿ ತನಗೆ ಪ್ರಪೋಸ್ ಮಾಡಲು ಕಾದಿದ್ದ ಯುವಕನನ್ನು ಕೂಡ ಗಮನಿಸಿರಲಿಲ್ಲ. ಇದೇ ಫೋಟೋವನ್ನು ಸದ್ಯದ ಸ್ಥಿತಿಗೆ ಹೋಲಿಸಿದ್ರೆ ಸ್ಮಾರ್ಟ್ ಫೋನ್ ನಲ್ಲಿ ಸೋಶಿಯಲ್ ಮೀಡಿಯಾ ಬ್ರೌಸ್ ಮಾಡ್ತಿದ್ದಾಳೆ ಎಂದೆನಿಸುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...