alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ನೈಜೀರಿಯಾ ಯುವಕನ ಭೋಜ್ಪುರಿ ಹಾಡು

lollipop-nigerian-cover

ಪವನ್ ಸಿಂಗ್ ರ ‘ಲೊಲಿಪಾಪ್ ಲಾಗೇಲು’ ಭೋಜ್ಪುರಿಯ ಸೂಪರ್ ಹಿಟ್ ಹಾಡು. ಈ ಜನಪದ ಹಾಡು ಕೇವಲ ಬಿಹಾರದಲ್ಲಿ ಮಾತ್ರವಲ್ಲ, ಭಾರತದ ಎಲ್ಲಾ ಕಡೆಯೂ ಫೇಮಸ್ ಆಗಿದೆ. ಸಾಮಾನ್ಯವಾಗಿ ಮದುವೆಗಳಲ್ಲಿ ಈ ಹಾಡು ಸದ್ದು ಮಾಡದೇ ಇರೋದಿಲ್ಲ.

ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಈ ಭೋಜ್ಪುರಿ ಸಾಂಗ್ ಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ನೈಜೀರಿಯಾದ ಗಾಯಕನೊಬ್ಬ ಈ ಸಾಂಗ್ ಅನ್ನು ಡಿಫರೆಂಟ್ ಆಗಿ ಹಾಡಿದ್ದಾನೆ. ಸ್ಯಾಮ್ಯುಯೆಲ್ ಅಡೆಪೋಜು ಅಲಿಯಾಸ್ ಸ್ಯಾಮ್ಯುಯೆಲ್ ಸಿಂಗ್ ಎಂಬಾತ ಈ ಹಾಡಿನ ಮೂಲಕವೇ ಫೇಸ್ಬುಕ್ ನಲ್ಲಿ ಹೀರೋ ಆಗಿದ್ದಾನೆ.

ಸ್ಯಾಮ್ಯುಯೆಲ್ ಹಾಡಿರೋ ಹಾಡನ್ನು 5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 17,000 ಮಂದಿ ಶೇರ್ ಮಾಡಿದ್ದಾರೆ. ಭಾರತದ ಸಂಸ್ಕೃತಿ ಮತ್ತು ಬಾಲಿವುಡ್ ಹಾಡುಗಳಿಗೆ ಮಾರು ಹೋಗಿರೋ ಈ ಯುವಕ ತನ್ನ ಹೆಸರನ್ನು ಸ್ಯಾಮ್ಯುಯೆಲ್ ಸಿಂಗ್ ಅಂತಾ ಬದಲಾಯಿಸಿಕೊಂಡಿರೋದು ವಿಶೇಷ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...