alex Certify
ಕನ್ನಡ ದುನಿಯಾ       Mobile App
       

Kannada Duniya

ದೃಷ್ಟಿಹೀನತೆ ಸಮಸ್ಯೆಗೆ ಸಿಕ್ಕಿದೆ ಹೊಸ ಪರಿಹಾರ

ಅಂಧರಿಗೆ ಕೂಡ ಕಣ್ಣು ಕಾಣಿಸುವಂತಹ ಸ್ಮಾರ್ಟ್ ಗ್ಲಾಸ್ ಗಳನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಇದೀಗ ದೃಷ್ಟಿಹೀನತೆಗೆ ಮತ್ತೊಂದು ಅತ್ಯಾಧುನಿಕ ಪರಿಹಾರ ಸಿಕ್ಕಿದೆ. ಇಸ್ರೇಲ್ ನ ಶಾರೆ ಜೆಡೆಕ್ ಮೆಡಿಕಲ್ ಸೆಂಟರ್ ಹಾಗೂ ಬಾರ್ ಇಲನ್ ಯೂನಿವರ್ಸಿಟಿ ನಡೆಸಿದ ಸಂಶೋಧನೆಯ ಫಲ ಇದು.

ಶಸ್ತ್ರಚಿಕಿತ್ಸೆಯಲ್ಲ, ಬದಲಾಗಿ ವಿಶಿಷ್ಟವಾದ ಐ ಡ್ರಾಪ್. ಇದಕ್ಕೆ ನ್ಯಾನೋ ಡ್ರಾಪ್ಸ್ ಅಂತಾ ವಿಜ್ಞಾನಿಗಳು ಹೆಸರಿಟ್ಟಿದ್ದಾರೆ. ಲೇಸರ್ ಟ್ರೀಟ್ಮೆಂಟ್ ಜೊತೆಗೆ ಈ ಐಡ್ರಾಪ್ ಬಳಸಿದ್ರೆ ಅಂಧರಿಗೂ ದೃಷ್ಟಿ ಬರುತ್ತದೆ ಅಂತಾ ವಿಜ್ಞಾನಿಗಳು ಹೇಳ್ತಿದ್ದಾರೆ. ಈ ಬಗ್ಗೆ ಅವರು ನಡೆಸಿರುವ ಪ್ರಯೋಗ ಕೂಡ ಯಶಸ್ವಿಯಾಗಿದೆ.

ಮೊದಲು ಸ್ಮಾರ್ಟ್ ಫೋನ್ ಆ್ಯಪ್ ಮೂಲಕ ಕಣ್ಣಿನಲ್ಲಿರುವ ಸಮಸ್ಯೆ ಏನು ಅನ್ನೋದನ್ನು ಪತ್ತೆ ಮಾಡಲಾಗುತ್ತದೆ. ನಂತರ ಕೇವಲ ಒಂದು ಸೆಕೆಂಡ್ ಅವಧಿಯಲ್ಲಿ ಮೈಕ್ರೋಸರ್ಜರಿ ಮಾಡಲಾಗುತ್ತದೆ. ಅದಾದ್ಮೇಲೆ ಕಣ್ಣಿಗೆ ನ್ಯಾನೋ ಡ್ರಾಪ್ಸ್ ಹಾಕಿದ್ರೆ ದೃಷ್ಟಿಹೀನತೆಯ ಸಮಸ್ಯೆ ನಿವಾರಣೆಯಾಗುತ್ತದೆ. ದೂರದೃಷ್ಟಿ, ಸಮೀಪ ದೃಷ್ಟಿ ದೋಷವಿರುವವರಿಗೆ ಸಹ ಇದು ಪ್ರಯೋಜನಕಾರಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...