alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಬ್ರಿಟನ್ ಯುವಕನ ಮೇಕಪ್ ನೋವು

scott-ayton-laplanche-facebook-650_650x400_71500048922

ಬ್ರಿಟನ್ ನಲ್ಲಿ ಸಲಿಂಗಿಯೊಬ್ಬ ಮಾಡಿರುವ ಫೇಸ್ಬುಕ್ ಪೋಸ್ಟ್ ವೈರಲ್ ಆಗಿದೆ. 20 ವರ್ಷದ ಯುವಕ ಸ್ಕಾಟ್ ಆಯೋಟನ್ ಲ್ಯಾಪ್ಲಾನ್ಚೆ ಎಂಬಾತ ನಿತ್ಯವೂ ಮೇಕಪ್ ಮಾಡಿಕೊಂಡು ಕಚೇರಿಗೆ ಹೋಗ್ತಿದ್ದ. ಸುಮಾರು 8-9 ತಿಂಗಳಿನಿಂದ ಅಲ್ಲೇ ಕೆಲಸ ಮಾಡ್ತಿದ್ದಾನೆ. ಅವನ ಮೇಕಪ್ ನೋಡಿ ಕಂಪನಿಯ ಮ್ಯಾನೇಜರ್ ಗಳೆಲ್ಲ ಮೆಚ್ಚಿಕೊಂಡಿದ್ದರಂತೆ.

ಆದ್ರೀಗ ಕಂಪನಿಯ ಮ್ಯಾನೇಜ್ಮೆಂಟ್ ಬದಲಾಗಿದೆ. ಹೊಸ ಬಾಸ್ ಸ್ಕಾಟ್ ನನ್ನು ಕರೆದು ಮೇಕಪ್ ರಿಮೂವ್ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಕಚೇರಿಗೆ ಮೇಕಪ್ ಮಾಡಿಕೊಂಡು ಬರಬೇಡ ಎಂದಿದ್ದಾರೆ. ಇದು ತಾರತಮ್ಯ ಧೋರಣೆ ಅನ್ನೋದು ಸ್ಕಾಟ್ ಆರೋಪ.

ಕಚೇರಿಯ ಮಹಿಳಾ ಉದ್ಯೋಗಿಗಳು ತನಗಿಂತ್ಲೂ ಹೆಚ್ಚು ಮೇಕಪ್ ಮಾಡಿಕೊಂಡು ಬರ್ತಾರೆ. ನಾನೂ ಒಂದು ಸ್ವಲ್ಪ ಕ್ರೀಮ್, ಪೌಡರ್, ಲಿಪ್ ಸ್ಟಿಕ್, ಕಾಡಿಗೆ ಹಚ್ಚಿಕೊಂಡ್ರೆ ತಪ್ಪೇನು ಅನ್ನೋದು ಅವನ ಪ್ರಶ್ನೆ. ಮಹಿಳೆಯರು ಮೇಕಪ್ ಮಾಡಿಕೊಳ್ಳಬಹುದು ಅಂತಾದ್ರೆ ಪುರುಷರು ಕೂಡ ಮಾಡಿಕೊಳ್ಳಬಹುದು ಎಂದರ್ಥ, ಆಗ ಮಾತ್ರ ಸಮಾನತೆ ಸಿಗಲು ಸಾಧ್ಯ ಎನ್ನುತ್ತಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...