alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಳಿದ್ರೆ ಈ ಮೀನಿನ ಬೆಲೆ ತಿರುಗುತ್ತೆ ತಲೆ..!

tuna_1483ಜಪಾನ್ ನಲ್ಲಿ ಸರಣಿ ರೆಸ್ಟೋರೆಂಟ್ ನಡೆಸುತ್ತಿರುವ ವ್ಯಕ್ತಿಯೊಬ್ಬ ಹರಾಜಿನಲ್ಲಿ ಕೊಂಡುಕೊಂಡಿರುವ ಮೀನಿನ ಬೆಲೆ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ಈತ ಬರೋಬ್ಬರಿ 632,000 ಡಾಲರ್ ಅಂದ್ರೆ 4,29,69,806 ರೂ. ಬೆಲೆ ತೆತ್ತಿದ್ದಾನೆ.

ಟೋಕಿಯೋದಲ್ಲಿ ಗುರುವಾರದಂದು ಈ ಹರಾಜು ನಡೆದಿದ್ದು, ಜಪಾನ್ ನ ಉತ್ತರ ಸಮುದ್ರದಲ್ಲಿ ಸಿಕ್ಕಿದ್ದ ಬ್ಲೂಫಿನ್ ಟೂನಾ ಮೀನು ಈ ಭಾರೀ ಬೆಲೆಗೆ ಹರಾಜಾಗಿದೆ. ಕಿಯೊಮೋರಾ ಕಾರ್ಪೋರೇಷನ್ ನಡೆಸುತ್ತಿರುವ ಸುಶಿ ರೆಸ್ಟೋರೆಂಟ್ ಗಾಗಿ ಈ ಮೀನನ್ನು ಕಿಯೋಶಿ ಕಿಮುರಾ ಖರೀದಿಸಿದ್ದಾರೆ.

ಬ್ಲೂಫಿನ್ ಮೀನುಗಳಿಗೆ ಬಹು ಬೇಡಿಕೆಯಿದ್ದು, ಮಾರುಕಟ್ಟೆಯಲ್ಲಿ ಅರ್ಧ ಕೆ.ಜಿ. ಗೆ 10 ಡಾಲರ್ ಬೆಲೆ ಇದೆ ಎನ್ನಲಾಗಿದೆ. ಆದರೆ ಭಾರೀ ಗಾತ್ರದ ಮೀನುಗಳು ಬಲು ರುಚಿಯಾಗಿರುತ್ತವೆ ಎನ್ನುವ ಕಾರಣಕ್ಕಾಗಿ ದುಬಾರಿ ಬೆಲೆಗೆ ಮಾರಾಟವಾಗುತ್ತವೆ. ಹೀಗಾಗಿ ಕಿಯೋಶಿ ಕಿಮುರಾ ಇಷ್ಟು ಬೆಲೆ ತೆತ್ತಿದ್ದು, ಅರ್ಧ ಕೆ.ಜಿ. ಗೆ 3 ಸಾವಿರ ಡಾಲರ್ ನೀಡಿದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...