alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಫೆರಾರಿ ಪ್ರಿಯನ ಬಳಿಯಿರೋ ಕಾರುಗಳನ್ನೊಮ್ಮೆ ನೋಡಿ..

ferari

ಬಹುತೇಕ ಎಲ್ಲರಿಗೂ ಕಾರ್ ಕ್ರೇಝ್ ಇರುತ್ತೆ. ದುಡ್ಡಿರೋರು ಹತ್ತಾರು ಐಷಾರಾಮಿ ಕಾರುಗಳನ್ನು ಇಟ್ಕೋಬಹುದು. ಆದ್ರೆ ಇವರಿಗೆ  ಫೆರಾರಿ ಕಾರ್ ಗಳ ಹುಚ್ಚು, ಡೇವಿಡ್ ಲೀ ಬಳಿ 330 ಕೋಟಿ ಮೌಲ್ಯದ ಕಾರುಗಳಿವೆ. ಎಲ್ಲವೂ ಒಂದಕ್ಕಿಂತ ಒಂದು ಅದ್ಭುತವಾಗಿವೆ. 13 ವರ್ಷದವರಿದ್ದಾಗ ಡೇವಿಡ್ ಲೀ ತಂದೆ ಹಿಂಗ್ ವಾ ಲೀ ಬಡತನದಿಂದ ಕಂಗೆಟ್ಟಿದ್ರು. ಚೀನಾದಿಂದ ಹಾಂಗ್ ಕಾಂಗ್ ವರೆಗೆ ಕಾಲುವೆಯಲ್ಲಿ ಈಜಿಕೊಂಡೇ ಹೋಗಿದ್ದರಂತೆ. ಕೆತ್ತನೆ ಕಲಿತು ಸ್ವಂತದ್ದೊಂದು ಆಭರಣ ಅಂಗಡಿ ತೆರೆದ ಮೇಲೆ ಅವರ ಅದೃಷ್ಟವೇ ಬದಲಾಗಿತ್ತು.

ferari-1ಶೀಘ್ರವೇ 9 ವರ್ಷದ ಮಗ ಡೇವಿಡ್ ಜೊತೆ ಅಮೆರಿಕಕ್ಕೆ ಬಂದು ನೆಲೆಸಿದ್ರು. ತಂದೆ ಪಟ್ಟಿದ್ದ ಕಷ್ಟವನ್ನೆಲ್ಲ ಕಣ್ಣಾರೆ ಕಂಡಿದ್ದ ಡೇವಿಡ್ ಕಾರು ಕೊಂಡುಕೊಳ್ಳುವಂತೆ ಒಮ್ಮೆಯೂ ಅವರನ್ನು ಕೇಳಿರಲಿಲ್ಲ. ತಮ್ಮ ಸ್ವಂತ ಹಣದಿಂದ್ಲೇ ಉದ್ಯಮ ಶುರು ಮಾಡಿದ್ರು. ಈಗ ಕೋಟಿ ಕೋಟಿ ಸಂಪಾದಿಸಿರುವ ಡೇವಿಡ್ ತಮಗಿಷ್ಟ ಬಂದಿದ್ದನ್ನು ಮಾಡ್ತಾರೆ. ಅವರಿಗೆ ಅತ್ಯಂತ ಇಷ್ಟವಾದ ಹವ್ಯಾಸ ಫೆರಾರಿ ಕಾರುಗಳನ್ನು ಸಂಗ್ರಹಿಸೋದು.

ferari-22002 ರಲ್ಲಿ ಮೈಕಲ್ ಶುಮಾಕರ್ ಗೆದ್ದಿದ್ದ ಫೆರಾರಿಯಿಂದ ಹಿಡಿದು ಎಲ್ಲ ಬಗೆಯ ಕಾರುಗಳು ಇವರ ಬಳಿ ಇವೆ. 1964 250 Lusso Competizone, 1987 288 GTO EVO, F50, Mercedes 300 SLR, The Enzo, La Ferrari, Scarlet Ferrari, F40  ಹೀಗೆ ಫೆರಾರಿಯ ಎಲ್ಲಾ ಮಾಡೆಲ್ ಗಳನ್ನೂ ಡೇವಿಡ್ ಇಟ್ಕೊಂಡಿದ್ದಾರೆ. ಇವುಗಳ ಮೌಲ್ಯ 330 ಕೋಟಿ ರೂಪಾಯಿಗೂ ಅಧಿಕ. ಪರಿಶ್ರಮ, ತಾಳ್ಮೆ ಇದ್ರೆ ಗುರಿ ತಲುಪೋದು ಬಹಳ ಸುಲಭ ಎನ್ನುತ್ತಾರೆ ಡೇವಿಡ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...