alex Certify
ಕನ್ನಡ ದುನಿಯಾ       Mobile App
       

Kannada Duniya

ಲಕ್ ಅಂದ್ರೆ ಇದಪ್ಪ….!

ಕೆಲವೊಮ್ಮೆ ಲಕ್ ಎನ್ನುವುದು ಹೇಗೆ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಕೆನಡಾದ ಯುವಕನಿಗೆ ಲಕ್ ಎನ್ನುವುದು ಲಾಟರಿಯ ರೂಪದಲ್ಲಿ ಬಂದಿದೆ.

ಲಾಟರಿಗೆ ಹಣ ಸುರಿಯುವ ಅದೆಷ್ಟೋ ಜನರಿಗೆ, ಜೀವನದಲ್ಲಿ ಒಮ್ಮೆಯೂ ಲಾಟರಿ ಹೊಡೆಯುವುದಿಲ್ಲ. ಆದರೆ ಕೆನಡಾದ ಮೆಲ್ಲಿಂಗ್ ಎನ್ನುವ 28 ವರ್ಷದ ಯುವಕನಿಗೆ ಐದು ತಿಂಗಳಲ್ಲಿ ಎರಡು ಬಾರಿ ಲಾಟರಿ ಹೊಡೆದಿದೆ.

ಐದು ತಿಂಗಳ ಅಂತರದಲ್ಲಿ ಲಕ್ ಕುದುರಿದ್ದರಿಂದ, ಏಕಾಏಕಿ ಮಲ್ಟಿ ಮಿಲೇನಿಯರ್ ಆಗಿದ್ದಾನೆ. ಇದೀಗ 28ರ ಈ ಯುವಕ 2.7 ಮಿಲಿಯನ್ ಡಾಲರ್‌ನ ಒಡೆಯನಾಗಿದ್ದಾನೆ.

ಕೇವಲ 20 ಡಾಲರ್‌ಗೆ ತೆಗೆದುಕೊಂಡ ಲಾಟರಿಗಳಿಂದ ಇಷ್ಟು ದೊಡ್ಡ ಮೊತ್ತವನ್ನು ಸಂಪಾದಿಸಿದ್ದಾನೆ. ಮೊದಲ ಬಾರಿಗೆ ಏಪ್ರಿಲ್ ತಿಂಗಳಲ್ಲಿ 1.2 ಮಿಲಿಯನ್ ಡಾಲರ್ ಮೊತ್ತದ ಬಹುಮಾನ ಬಂದಿದ್ದು, ಕೇವಲ ಐದು ತಿಂಗಳ ಅಂತರದಲ್ಲಿ ಮತ್ತೆ ಎರಡು ಮಿಲಿಯನ್ ಡಾಲರ್ ಬಂದಿದೆ. ತೆರಿಗೆ ಎಲ್ಲವನ್ನು ಕಳೆದು ಇದೀಗ ಯುವಕನ ಕೈಲಿ 2.7 ಮಿಲಿಯನ್ ಡಾಲರ್ ಹಣವಿದೆ ಎಂದು ಹೇಳಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...