alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಈ ಹುಡುಗ ರಜಾ ಕೇಳಿರುವ ‘ಸ್ಟೈಲ್’

ಚಿಕ್ಕವರಿದ್ದಾಗ ಎಲ್ಲರೂ ತರಗತಿಗೆ ಚಕ್ಕರ್ ಹಾಕಿರ್ತಾರೆ. ಶಿಕ್ಷಕರಿಂದ ಬೈಗುಳ ತಪ್ಪಿಸಿಕೊಳ್ಳಲು ನಂತರ ಸುಳ್ಳು ಕಥೆ ಕಟ್ಟೋದು ಕೂಡ ಕಾಮನ್. ಆದ್ರೆ ಬಾಲಕನೊಬ್ಬ ಶಿಕ್ಷಕರ ಬಳಿ ರಜಾಕ್ಕೆ ಅರ್ಜಿ ಹಾಕಿರೋ ಸ್ಟೈಲ್ ಈಗ ವೈರಲ್ ಆಗಿದೆ.

ಈತ ಪಾಕಿಸ್ತಾನದ ಮಾಡೆಲ್ ಪ್ರೈಮರಿ ಘೋರ್ವಾರಾ ಶಾಲೆಯ ವಿದ್ಯಾರ್ಥಿ. ಹೆಡ್ ಮಾಸ್ಟರ್ ಬಳಿ ರಜಾ ಕೇಳಬೇಕಿತ್ತು. ನೇರವಾಗಿ ಕೇಳಿದ್ರೆ ಬೈಸಿಕೊಳ್ಳೋದು ಗ್ಯಾರಂಟಿ, ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ ಕೊಟ್ರೂ ಬೈಗುಳ್ಳ ತಪ್ಪಿದ್ದಲ್ಲ ಅನ್ನೋದು ಅವನಿಗೆ ಗೊತ್ತಿತ್ತು.

ಹಾಗಾಗಿ ಈ ವಿದ್ಯಾರ್ಥಿ ಸಿಂಪಲ್ ಆಗಿ ಹಾಡು ಹಾಡಿದ್ದಾನೆ. ಹಾಡಿನ ಮೂಲಕವೇ ಹೆಡ್ ಮಾಸ್ಟರ್ ಬಳಿ ಲೀವ್ ಅಪ್ಲಿಕೇಷನ್ ಹಾಕಿದ್ದಾನೆ. ನನಗೆ ಹುಷಾರಿಲ್ಲ, ಜ್ವರದಿಂದ ಬಳಲುತ್ತಿದ್ದೇನೆ, ಹಾಗಾಗಿ ಶಾಲೆಗೆ ಬರಲು ಸಾಧ್ಯವಿಲ್ಲ ಅಂತಾ ಹಾಡಿನ ಮೂಲಕ ಹೇಳಿದ್ದಾನೆ. ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...