alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀದೇವಿ ಮೃತದೇಹವನ್ನು ಭಾರತಕ್ಕೆ ತರಲು ದುಬೈನಲ್ಲಿ ನೆರವಾಗಿದ್ದು ಇವರು….

ಲಕ್ಷಾಂತರ ಅಭಿಮಾನಿಗಳಿಂದ ಬಹುದೂರ ಸಾಗಿರೋ ನಟಿ ಶ್ರೀದೇವಿ, ದುಬೈನಲ್ಲಿ ಕೊನೆಯುಸಿರೆಳೆದಿದ್ರು. ಶ್ರೀದೇವಿಯ ಮೃತದೇಹವನ್ನು ಮರಳಿ ಭಾರತಕ್ಕೆ ತರಲು ನೆರವಾದವನು ಕೇರಳ ಮೂಲದ ವ್ಯಕ್ತಿ. ಅಶ್ರಫ್ ಶೆರ್ರಿ ಥಮರಸ್ಸೆರಿ ಎಂಬ 44 ವರ್ಷದ ವ್ಯಕ್ತಿ ಕಪೂರ್ ಕುಟುಂಬಕ್ಕೆ ದೂರದ ದೇಶದಲ್ಲಿ ಸಹಾಯ ಮಾಡಿದ್ದಾರೆ.

ಕೇವಲ ಶ್ರೀದೇವಿ ಮೃತದೇಹ ಮಾತ್ರವಲ್ಲ, 38 ದೇಶಗಳಿಗೆ ಒಟ್ಟು 4700 ಮೃತದೇಹಗಳನ್ನು ರವಾನೆ ಮಾಡಲು ಅಶ್ರಫ್ ಈವರೆಗೆ ನೆರವು ನೀಡಿದ್ದಾರೆ. ದುಬೈನಲ್ಲಿ ಯಾರಾದ್ರೂ ಮೃತಪಟ್ಟರೆ ನಂತರ ನಡೆಯುವ ಕಾನೂನು ಪ್ರಕ್ರಿಯೆಗಳೆಲ್ಲವೂ ಅವರಿಗೆಗೆ ಗೊತ್ತು.

ನಿನ್ನೆ ಶ್ರೀದೇವಿ ಸೇರಿದಂತೆ ಒಟ್ಟು 5 ಮೃತದೇಹಗಳನ್ನು ಬೇರೆ ಬೇರೆ ದೇಶಗಳಿಗೆ ಸಾಗಿಸಲು ಅಶ್ರಫ್ ಸಹಾಯ ಮಾಡಿದ್ದಾರೆ. ಅಶ್ರಫ್ ಬಗ್ಗೆ ತಿಳಿದಿದ್ದ ನೂರಾರು ಪತ್ರಕರ್ತರು ಶ್ರೀದೇವಿ ಮೃತದೇಹ ಆಗಮನ ಯಾವಾಗ ಎಂದು ತಿಳಿದುಕೊಳ್ಳಲು ಅವರಿಗೆ ಕರೆ ಮಾಡಿದ್ದರಂತೆ.

ದುಬೈನಿಂದ ಶ್ರೀದೇವಿ ಮೃತದೇಹವನ್ನು ತರಲು ಬೇಕಾದ ದಾಖಲೆಗಳನ್ನು ತಯಾರಿಸಿಕೊಟ್ಟಿದ್ದಾರೆ ಅಶ್ರಫ್. ಶ್ರೀದೇವಿ ಮೃತದೇಹವನ್ನು ಹೊತ್ತ ಖಾಸಗಿ ವಿಮಾನ, ದುಬೈನಿಂದ ಹಾರಿದ ಬಳಿಕವಷ್ಟೆ ಅಶ್ರಫ್ ಮನೆಗೆ ಮರಳಿದ್ದಾರಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...