alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕದಲ್ಲಿ ‘ಒಂದು ಮೊಟ್ಟೆಯ ಕಥೆ’ ಕಲರವ

motte

‘ಒಂದು ಮೊಟ್ಟೆಯ ಕಥೆ’ ಇದೊಂದು ಕಾಮಿಡಿ ಚಿತ್ರ. 28 ವರ್ಷಕ್ಕೇ ತಲೆಕೂದಲೆಲ್ಲಾ ಉದುರಿದ ಬಕ್ಕತಲೆಯವನ ಕಥೆ. ಈ ಚಿತ್ರದ ಕಥೆ, ನಿರ್ದೇಶನ ಹಾಗೂ ನಟನೆ ಎಲ್ಲವೂ ರಾಜ್.ಬಿ.ಶೆಟ್ಟಿ ಅವರದ್ದು. ‘ಲೂಸಿಯಾ’ ಮತ್ತು ‘ಯು ಟರ್ನ್’ ಖ್ಯಾತಿಯ ಪವನ್ ಕುಮಾರ್ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ‘ಒಂದು ಮೊಟ್ಟೆಯ ಕಥೆ’ ಕೂಡ ಒಂದು.

ಮೇ 6ರಂದು ನ್ಯೂಯಾರ್ಕ್ ನಲ್ಲಿ ನಡೆಯಲಿರುವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ‘ಒಂದು ಮೊಟ್ಟೆಯ ಕಥೆ’ ಚಿತ್ರ ಪ್ರದರ್ಶನಗೊಳ್ತಾ ಇದೆ. ಇದಾದ ಬಳಿಕ ಅಮೆರಿಕದಲ್ಲಿ ಒಂದು ವಾರದ ಕಾಲ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ನಂತರ ಲಂಡನ್ ನಲ್ಲಿ ನಡೆಯಲಿರೋ ಭಾರತೀಯ ಚಲನಚಿತ್ರೋತ್ಸವದಲ್ಲೂ ಪ್ರದರ್ಶನಗೊಳ್ಳಲಿದೆ.

ಈ ಚಿತ್ರದಲ್ಲಿ ಸೂಕ್ಷ್ಮ ವಿಚಾರವೊಂದನ್ನು ಮನರಂಜನಾತ್ಮಕವಾಗಿ ಹೇಳಲಾಗಿದೆ. ಈಗ ಸಾಮಾಜಿಕ ತಾಣಗಳ ಹವಾ ಜೋರಾಗಿರೋದ್ರಿಂದ ಫೋಟೋಗಳಿಗೆ ಬಹಳ ಮಹತ್ವವಿದೆ. ನಾವು ಹೇಗ್ ಕಾಣ್ತೀವಿ ಅನ್ನೋದು ಎಲ್ಲರಿಗೂ ಮುಖ್ಯವಾಗಿದೆ. ಹಾಗಾಗಿ ‘ಒಂದು ಮೊಟ್ಟೆಯ ಕಥೆ’ ಸಮಯಕ್ಕೆ ತಕ್ಕುದಾದ ಚಿತ್ರ ಅಂತಾ ಪವನ್ ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...