alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಗಳಿಗೆ ಇಂಥ ಆಫರ್ ಬೇರೆಲ್ಲೂ ಸಿಗಲ್ಲ !

thiland

ಫೆಬ್ರವರಿ 14 ರಂದು ಪ್ರೇಮಿಗಳಿಗೆ ಹಬ್ಬ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಪ್ರೇಮಿಗಳು ಸದಾ ನೆನಪಿನಲ್ಲಿರುವಂತೆ ‘ಪ್ರೇಮಿಗಳ ದಿನ’ವನ್ನು ಆಚರಿಸುತ್ತಾರೆ. ಕೆಲವರು ಅಂದು ಮದುವೆ ಕೂಡ ಆಗುತ್ತಾರೆ. ಕೆಲವರು ಆಕಾಶದಲ್ಲಿ, ನೀರಿನಲ್ಲಿ, ಬೆಟ್ಟದ ತುದಿಯಲ್ಲಿ ಹೀಗೆ ವಿಭಿನ್ನ ಪ್ರಯತ್ನ ನಡೆಸುತ್ತಾರೆ.

ಥೈಲ್ಯಾಂಡ್ ನಲ್ಲಿರುವ ಟ್ರಾಂಗ್ ಐಲ್ಯಾಂಡ್ ನಲ್ಲಿ ವಿಭಿನ್ನವಾಗಿ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಕಳೆದ 20 ವರ್ಷಗಳಿಂದ ಈ ಆಚರಣೆ ಜಾರಿಯಲ್ಲಿದ್ದು, ಅಂದು ಪ್ರೇಮಿಗಳಿಗೆ ಮದುವೆ ಕೂಡ ಮಾಡಿಸಲಾಗುತ್ತದೆ. ಮದುವೆಯೆಂದರೆ ಸಾಮಾನ್ಯ ಮದುವೆಯಲ್ಲ, ನೀರಿನಾಳದಲ್ಲಿ ಮದುವೆ ಮಾಡಿಸಲಾಗುತ್ತದೆ. ಇದಕ್ಕಾಗಿ ಪ್ರೇಮಿಗಳು ತಮ್ಮ ಸರ್ಟಿಫಿಕೇಟ್ ತರಬೇಕು. ಸರ್ಟಿಫಿಕೇಟ್ ಎಂದರೆ. ಬೇರೇನೋ ಅಂದುಕೊಳ್ಳಬೇಡಿ.

ನೀರಿನಾಳದಲ್ಲಿ ಮದುವೆಯಾಗಲಿಚ್ಛಿಸುವ ಪ್ರೇಮಿಗಳು ‘ಸ್ಕೂಬಾ ಡೈವಿಂಗ್’ ಸರ್ಟಿಫಿಕೇಟ್ ಹೊಂದಿರಬೇಕು. ಸರ್ಟಿಫಿಕೇಟ್ ತರುವ ಜೋಡಿಗಳಿಗೆ ಪ್ರೇಮಿಗಳ ದಿನಾಚರಣೆಯಂದು ಥೈಲ್ಯಾಂಡ್ ಸರ್ಕಾರವೇ ನೀರಿನಾಳದಲ್ಲಿ ಮದುವೆಯಾಗುವ ವ್ಯವಸ್ಥೆ ಮಾಡಲಿದೆ. ಇದಕ್ಕಾಗಿ ವಿಶ್ವದ ಎಲ್ಲಾ ಕಡೆಗಳಿಂದ ಪ್ರೇಮಿಗಳು ಸ್ಕೂಬಾ ಡೈವಿಂಗ್ ಕಲಿತು ಬಂದು ನೀರಿನಾಳದಲ್ಲಿ ಮದುವೆಯಾಗುತ್ತಾರೆ.

vday
vday
vday

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...