alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸದಲ್ಲಿ ಮೋದಿಯವರ ಭೋಜನ ಹೇಗಿರುತ್ತೆ ಗೊತ್ತಾ?

ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅರಬ್ ರಾಷ್ಟ್ರಕ್ಕೆ ಭೇಟಿ ನೀಡಿದ್ದರು. ಯುಎಇ ರಾಜ ಮೊಹಮ್ಮದ್ ಬಿನ್ ಜಾಯೆದ್ ಆಹ್ವಾನದ ಮೇರೆಗೆ ಪ್ರಸಿದ್ಧ ಬಾಣಸಿಗರಾದ ಸಂಜೀವ್ ಕಪೂರ್ ಅಲ್ಲಿ ಮೋದಿಯವರಿಗೆ ಅಡುಗೆ ಸಿದ್ಧಪಡಿಸಿದ್ದರು.

ಈ ಕುರಿತು ಅನುಭವ ಹಾಗೂ ಮೋದಿಯವರೊಂದಿಗಿನ ಪೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಸಂಜೀವ್ ಹೇಳುವ ಹಾಗೆ ಮೋದಿಯವರು ನ್ಯೂಟ್ರಿಶಿಯನ್, ಪ್ರೋಟೀನ್ ಯುಕ್ತ ಆರೋಗ್ಯಕರ ಹಾಗೂ ರುಚಿಕರ ಅಡುಗೆಗಳನ್ನು ಇಷ್ಟಪಡುತ್ತಾರೆ. ಸಿಂಪಲ್ ಆಗಿರೋ ಸಸ್ಯಾಹಾರವನ್ನೇ ಅವರು ಬಯಸುತ್ತಾರೆ.

ಯುಎಇ ನಲ್ಲಿದ್ದಾಗ ಮೋದಿ ಬೆಳಗಿನ ತಿಂಡಿಗೆ ಬ್ರೆಡ್ ಹಾಗೂ 9 ಪ್ರಾಚೀನ ಧಾನ್ಯಗಳನ್ನು ಸೇವಿಸಿದ್ದರು. ಊಟದ ತಟ್ಟೆಯಲ್ಲಿ ಅವರಿಗೆ ಅನ್ನ ಹಾಗೂ ದಾಲ್ ಇರಲೇಬೇಕು. ಜೊತೆಗೆ ದೋಸೆ, ಬೀಟ್ರೂಟ್ ನಿಂದ ಮಾಡಿದ ತಿನಿಸನ್ನೂ ತಿನ್ನುತ್ತಾರೆ. ಅಲ್ಲದೇ ರಾತ್ರಿಯ ಊಟಕ್ಕೆ ತಾವು ಕೇಸರಿ ರೈಸ್, ಕ್ವಿನೋವಾ ಕೇಕ್, ಮೂಂಗ್ ದಾಲ್ ಭುಜಿಯಾ, ಪಂಪ್ಕಿನ್ ಡೆಸರ್ಟ್ ಮುಂತಾದವುಗಳನ್ನು ಮಾಡಿದ್ದಾಗಿ ಸಂಜೀವ್ ಹೇಳಿಕೊಂಡಿದ್ದಾರೆ. ಅಲ್ಲದೇ ಮೋದಿಯವರಿಗೆ ಕುಕ್ ಆಗಿ ಕೆಲಸ ಮಾಡಿದ್ದು ತಮಗೆ ಹೆಮ್ಮೆ ತಂದಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...