alex Certify
ಕನ್ನಡ ದುನಿಯಾ       Mobile App
       

Kannada Duniya

ಹೇಗಿದೆ ನೋಡಿ ಜಗತ್ತಿನ ಅತಿ ಚಿಕ್ಕ ಮೊಬೈಲ್….

ಆ್ಯಪಲ್ ಕಂಪನಿ 2016ರಲ್ಲಿ iPhone SEಯನ್ನು ಲಾಂಚ್ ಮಾಡಿತ್ತು. ಒಂದೇ ಕೈಯಲ್ಲಿ ಬಳಸಬಹುದಾದಂಥ ಚಿಕ್ಕ ಫೋನ್ ಇದು. ಜೇಬಿನಲ್ಲಿ ಇಟ್ಟುಕೊಳ್ಳೋದು ಕೂಡ ಸುಲಭ. ಆ್ಯಪಲ್ ಬಳಿಕ ಹಲವು ಕಂಪನಿಗಳು ಇಂಥದ್ದೇ ಪುಟಾಣಿ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದವು.

ಈಗ ವಿಶ್ವದ ಅತಿ ಚಿಕ್ಕ ಮೊಬೈಲ್, ಮಾರ್ಕೆಟ್ ಗೆ ಲಗ್ಗೆ ಇಟ್ಟಿದೆ. Zanco ಎಂಬ ಕಂಪನಿ ಈ ಮೊಬೈಲ್ ಅನ್ನು ತಯಾರಿಸಿದೆ. ಇದರ ಹೆಸರು The Zanco Tiny T1. ಈ ಮೊಬೈಲ್ ನಿಮ್ಮ ಹೆಬ್ಬೆರಳಿನ ಗಾತ್ರದಲ್ಲಿದೆ. ಚೆನ್ನಾಗಿ ಕಾರ್ಯನಿರ್ವಹಿಸಬಲ್ಲ ಕೀಬೋರ್ಡ್ ಹೊಂದಿದೆ.

0.49 ಇಂಚಿನ OLED ಡಿಸ್ ಪ್ಲೇ ಹೊಂದಿರೋ ಈ ಮೊಬೈಲ್ ನ ತೂಕ ಕೇವಲ 13 ಗ್ರಾಂ. MediaTek MTK6261D ಮದರ್ ಬೋರ್ಡ್, 32 ಎಂಬಿ RAM ಈ ಮೊಬೈಲ್ ನ ಸ್ಪೆಷಾಲಿಟಿ. 50 ಎಸ್ ಎಂ ಎಸ್ ಮತ್ತು 50 ಕಾಲ್ ಲಾಗ್ ಸ್ಟೋರ್ ಮಾಡಬಹುದು. 200 mAh ಬ್ಯಾಟರಿಯನ್ನು ಹೊಂದಿದೆ. ಇದೊಂದು 2ಜಿ ಫೋನ್ ಆಗಿದ್ದು, ಬ್ಲೂಟೂತ್ ಕನೆಕ್ಷನ್ ಕೂಡ ಇದೆ. ವಿಶ್ವದ ಅತಿ ಚಿಕ್ಕ ಮೊಬೈಲ್ ನ ಬೆಲೆ ಸುಮಾರು 2200 ರೂಪಾಯಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...