alex Certify
ಕನ್ನಡ ದುನಿಯಾ       Mobile App
       

Kannada Duniya

ಅದೃಷ್ಟ ಅಂದ್ರೆ ಇವನದ್ದೇ ನೋಡಿ !

powerball-lottery-ticketಕೆಲವರು ಏನೇ ಕೆಲಸ ಮಾಡಿದರೂ ವಿಫಲತೆಯನ್ನು ಕಾಣುತ್ತಾ ತಮ್ಮ ದುರಾದೃಷ್ಟವನ್ನು ಶಪಿಸುತ್ತಾರೆ. ಆದರೆ ಅಮೆರಿಕಾದ ಈ ವ್ಯಕ್ತಿ ಪಾಲಿಗೆ ಅದೃಷ್ಟವೆನ್ನುವುದು ಎರಡನೇ ಬಾರಿಗೆ ಹುಡುಕಿಕೊಂಡು ಬಂದಿದೆ.

ಲಾಟರಿ ಚಟವುಳ್ಳ ಬ್ರೂಸ್ ಮಗಿಸ್ಟ್ರೋ ಗೆ 2012 ರಲ್ಲಿ 1 ಬಿಲಿಯನ್ ಡಾಲರ್ ಮೊತ್ತ ಲಾಟರಿಯಲ್ಲಿ ಬಹುಮಾನವಾಗಿ ಬಂದಿತ್ತು. ಇದೀಗ ಆತ ಎರಡನೇ ಬಾರಿಗೆ ಮತ್ತೇ 1 ಬಿಲಿಯನ್ ಡಾಲರ್ ವಿಜೇತನಾಗಿದ್ದಾನೆ.

ಆದರೆ 2012 ರಲ್ಲಿ ಈತನಿಗೆ ಲಾಟರಿಯಲ್ಲಿ ಬಂದ ಬಹುಮಾನದ ಬಹುತೇಕ ಮೊತ್ತ ಕ್ಯಾನ್ಸರ್ ಪೀಡಿತಳಾಗಿದ್ದ ಆತನ ಪತ್ನಿಯ ಚಿಕಿತ್ಸೆಗಾಗಿ ಖರ್ಚಾಗಿದ್ದು, ಅಷ್ಟು ವೆಚ್ಚ ಮಾಡಿದರೂ ಆಕೆ ಬದುಕುಳಿಯಲಿಲ್ಲ. ಹೀಗಾಗಿ ಆಕೆಯ ಹಾರೈಕೆಯ ಫಲವಾಗಿ ತನಗೆ ಎರಡನೇ ಬಾರಿಗೆ ಮತ್ತೇ 1 ಬಿಲಿಯನ್ ಡಾಲರ್ ಬಹುಮಾನ ಬಂದಿರುವುದಾಗಿ ಹೇಳುವ ಬ್ರೂಸ್, ಈ ಮೊತ್ತವನ್ನು ತನ್ನ ಮಕ್ಕಳ ಉತ್ತಮ ಭವಿಷ್ಯಕ್ಕೆ ಬಳಸಿಕೊಳ್ಳುವುದಾಗಿ ತಿಳಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...