alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳನಿಂದಲೇ ಸೈಕಲ್ ಕದ್ಲು ಈ ಮಹಿಳೆ

cycle01

ಘಟನೆ ನಡೆದಿರುವುದು ಯುಕೆಯ ಬ್ರಿಸ್ಟಲ್ ನಲ್ಲಿ.  30 ವರ್ಷದ ಜೆನ್ನಿ ಮಾರ್ಟನ್ ಎಂಬಾಕೆಯ ಸೈಕಲ್ ಕಳುವಾಗಿತ್ತು. ಈ ಬಗ್ಗೆ ಮಹಿಳೆ ಫೇಸ್ಬುಕ್ ನಲ್ಲಿ ತನ್ನ ನೋವು ಹಂಚಿಕೊಂಡಿದ್ದಳು. ಸೈಕಲ್ ಹುಡುಕಿಕೊಡುವಂತೆ ವಿನಂತಿ ಮಾಡಿದ್ದಳು. ಹಲ ಗಂಟೆಗಳ ನಂತ್ರ ಫೇಸ್ಬುಕ್ ಮೂಲಕವೇ ಕಳ್ಳ ಸಿಕ್ಕಿಬಿದ್ದಿದ್ದಾನೆ.

ಮಹಿಳೆ ಸೈಕಲ್ ಕಳುವಾಗಿದೆ ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದರೆ, ಸೈಕಲ್ ಕದ್ದಿದ್ದ ಕಳ್ಳ ಸೈಕಲ್ ಮಾರಾಟಕ್ಕಿದೆ ಎಂದು ಜಾಹೀರಾತು ಹಾಕಿದ್ದ. ಫೇಸ್ಬುಕ್ ನಲ್ಲಿ ಆತ ಹಾಕಿದ್ದ ಪೋಸ್ಟ್ ಜೆನ್ನಿ ಸ್ನೇಹಿತರ ಕಣ್ಣಿಗೆ ಬಿದ್ದಿದೆ. ಇದನ್ನು ಸ್ನೇಹಿತರು ಜೆನ್ನಿಗೆ ಹೇಳಿದ್ದಾರೆ.

ಜೆನ್ನಿ, ಸ್ನೇಹಿತರಿಂದ ಮಾಹಿತಿ ಪಡೆದು ಪೊಲೀಸರಿಗೆ ಸಹಾಯ ಮಾಡುವಂತೆ ಕೇಳಿದ್ದಾಳೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ತಾನೇ ಕಾರ್ಯಕ್ಕಿಳಿದಿದ್ದಾಳೆ ಜೆನ್ನಿ. ಕಳ್ಳನ ಮನೆಗೆ ಹೋದ ಜೆನ್ನಿ, ಸೈಕಲ್ ಖರೀದಿ ಮಾಡುವುದಾಗಿ ಹೇಳಿದ್ದಾಳೆ. ಜೊತೆಗೆ ಸೈಕಲ್ ಬಗ್ಗೆ ಅದು, ಇದು ಪ್ರಶ್ನೆ ಕೇಳಿದ್ದಾಳೆ. ಸೈಕಲ್ ಸೀಟ್ ಎತ್ತರದಲ್ಲಿದೆ ಟೆಸ್ಟ್ ಡ್ರೈವ್ ಮಾಡಬೇಕೆಂದ ಜೆನ್ನಿ ಸೈಕಲ್ ಏರಿದ್ದಾಳೆ. ನಂತ್ರ ಜೆನ್ನಿ ಅಲ್ಲಿಗೆ ವಾಪಸ್ ಬರಲಿಲ್ಲ. ಕಳ್ಳ ಜೆನ್ನಿ ಬರ್ತಾಳೆಂದು ಕಾದು ಕುಳಿತು ಬೇಸ್ತು ಬಿದ್ದಿದ್ದ.

Subscribe Newsletter

Get latest updates on your inbox...

Opinion Poll

  • ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ವಿಫಲವಾಗಿದೆಯೇ..?

    View Results

    Loading ... Loading ...