alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣಗಳಲ್ಲಿ ವೈರಲ್ ಆಗಿದೆ ಇಮ್ರಾನ್ ಕೇಕ್ ಫೋಟೋ

ಪಾಕಿಸ್ತಾನದ ನಿಯೋಜಿತ ಪ್ರಧಾನಿ ಇಮ್ರಾನ್‌ ಖಾನ್‌ ಚುನಾವಣೆಯಲ್ಲಿ ಗೆದ್ದ ಸಂಭ್ರಮ ಇನ್ನೂ ಮರೆಯಾಗಿಲ್ಲ. ಆ.11 ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಇಮ್ರಾನ್‌ ಖಾನ್‌ ನ ಪುಟ್ಟ ಪ್ರತಿಮೆಯುಳ್ಳ ಕೇಕ್‌ ಇದೀಗ ಸುದ್ದಿ ಮಾಡಿದೆ.

ಆನ್‌ಲೈನ್‌, ಸಾಮಾಜಿಕ ತಾಣಗಲ್ಲಿ ಬಿಳಿ ಬಣ್ಣ ಪಥಾನಿ ಸೂಟ್‌ ಜತೆ ಹಸಿರು ಮತ್ತು ಕೆಂಪು ಬಣ್ಣದ ಶಾಲು ಹಾಕಿ ಮಾತನಾಡುತ್ತಿರುವ ಇಮ್ರಾನ್‌ ಖಾನ್‌ ರ ಕೇಕ್‌ ತಯಾರಿಸಲಾಗಿದ್ದು, ವ್ಯಾಪಕ ಬೇಡಿಕೆ ಕಲೆಹಾಕಿದೆ. ಆದರೆ ಸತ್ಯ ಸಂಗತಿ ಮಾತ್ರ ಬೇರೆ. ಸದ್ಯ ವೈರಲ್‌ ಆಗಿರುವ ಕೇಕ್‌, ಕಳೆದ ವರ್ಷ ಆರ್ಡರ್‌ ಬಂದಿದ್ದು ಎಂದು ಕೇಕ್‌ ತಯಾರಿಸಿದ 22 ವರ್ಷದ ವರ್ದಾ ಜಹೀದ್‌ ತಿಳಿಸಿದ್ದಾರೆ.

ಕಪ್ಪು ಬಣ್ಣದ ಶೇರ್ವಾನಿಯಲ್ಲಿ ಇಂದಿನ ರಾಜಕೀಯಕ್ಕೆ ಒಗ್ಗಿಕೊಳ್ಳುವಂತೆ ಕೇಕ್‌ ಮಾಡಲು ಇಚ್ಛೆಪಟ್ಟಿದ್ದೆ. ಆದರೆ ಇದನ್ನು ಮಾಡುವ ಮುನ್ನ, ಹಳೆ ಫೋಟೋ ವೈರಲ್‌ ಆಗಿ ಬಿಟ್ಟಿತು ಎಂದು ಅವರು ಹೇಳಿದ್ದಾರೆ.

ಕೇಕ್‌ ಫೋಟೋ ವೈರಲ್‌ ಆಗುತ್ತಿದ್ದಂತೆಯೇ ಜಹೀದ್‌ಗೆ ಕೇಕ್‌ ಆರ್ಡರ್‌ಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರಮಾಣ ವಚನ ಕಾರ್ಯಕ್ರಮ ನಿಗದಿ ದಿನಾಂಕ ಖಚಿತಗೊಂಡ ಕೂಡಲೇ ಆರ್ಡರ್‌ ಮಾಡುವುದಾಗಿ ಕರೆಗಳು ಬರುತ್ತಿವೆ. 4 ಕೆಜಿ ತೂಕದ ಕೇಕ್‌ಗೆ ಸುಮಾರು ಪಾಕಿಸ್ತಾನದ ಕರೆನ್ಸಿ ಲೆಕ್ಕದಲ್ಲಿ 4900 ರೂ. ತಗುಲಲಿದೆ. ಏತನ್ಮಧ್ಯೆ ಇನ್ನೊಂದು ಬಗೆಯ ಕೇಕ್‌ ಮಾಡಲೂ ಜಹೀದ್ ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...