alex Certify
ಕನ್ನಡ ದುನಿಯಾ       Mobile App
       

Kannada Duniya

ತಲೆಯಲ್ಲೂ ಆಡ್ತಾರೆ ಟೆನಿಸ್….

tenis

ಟೆನಿಸ್ ಅಂದ್ರೆ ಕೈಯಿಂದ ಆಡುವ ಆಟ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಟೆನಿಸ್ ಅನ್ನ ತಲೆಯಿಂದ್ಲೂ ಆಡಬಹುದು. ಅಚ್ಚರಿಯಾದ್ರೂ ಇದು ಸತ್ಯ. ಇಬ್ಬರು ಆಟಗಾರರ ನಡುವಣ ಹೆಡ್ ಟೆನಿಸ್ ಗೇಮ್ ವೈರಲ್ ಆಗಿದೆ. ಆಟಗಾರರ ಅದ್ಭುತ ಪ್ರತಿಭೆ ನೋಡಿ ಎಲ್ಲರೂ ದಂಗಾಗಿದ್ದಾರೆ.

ಅದೊಂದು ಅಧಿಕೃತ ಪಂದ್ಯವಾಗಿದ್ದು. ಮ್ಯಾಚ್ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ಕೂಡ ಬಂದಿದ್ರು. ತಲೆಯಲ್ಲೇ ಪಟಪಟನೆ ಚೆಂಡನ್ನು ಅವರು ಅತ್ತಿತ್ತ ಕಳಿಸ್ತಾ ಇದ್ರೆ ಅಲ್ಲಿ ನೆರೆದಿದ್ದ ಜನರು ಕಣ್ಣು ಮಿಟುಕಿಸದೇ ನೋಡ್ತಾ ಇದ್ರು.

ಈ ವಿಡಿಯೋ ಕ್ರೀಡಾಪ್ರಿಯರನ್ನು ನಿಜಕ್ಕೂ ತುದಿಗಾಲಲ್ಲಿ ನಿಲ್ಲಿಸುತ್ತೆ. ಆಟಗಾರರಲ್ಲೊಬ್ಬ ಟೇಬಲ್ ಮೇಲೆ ಹತ್ತಿ ಚೆಂಡನ್ನು ಸ್ಮಾಶ್ ಮಾಡ್ತಾನೆ. ಆ ಶಾಟ್ ಅಂತೂ ಅದ್ಭುತವಾಗಿದೆ. ಈ ವಿಡಿಯೋವನ್ನು ಫೇಸ್ಬುಕ್ ನಲ್ಲಿ 4 ಮಿಲಿಯನ್ ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 19,000 ಜನರು ಇದನ್ನು ಶೇರ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...