alex Certify
ಕನ್ನಡ ದುನಿಯಾ       Mobile App
       

Kannada Duniya

ಸೂಪರ್ ಮಾರ್ಕೆಟ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದವನು ರಾತ್ರಿಯಿಡೀ ಮಾಡಿದ್ದೇನು ಗೊತ್ತಾ?

ಆಕಸ್ಮಿಕವಾಗಿ ಸೂಪರ್ ಮಾರ್ಕೆಟ್ ಒಂದರಲ್ಲಿ ಲಾಕ್ ಆಗಿಬಿಟ್ರೆ ನೀವು ಏನ್ಮಾಡ್ತೀರಾ ಹೇಳಿ? ಸಹಾಯಕ್ಕಾಗಿ ಸ್ನೇಹಿತರನ್ನೋ, ಕುಟುಂಬದವರನ್ನೋ ಅಥವಾ ಪೊಲೀಸರಿಗೋ ಕರೆ ಮಾಡ್ತೀರಾ. ಆದ್ರೆ ಅಮೆರಿಕದ ವಿಸ್ಕನ್ಸಿನ್ ನಗರದಲ್ಲಿ ವ್ಯಕ್ತಿಯೊಬ್ಬ ಮಾಡಿದ್ದೇ ಬೇರೆ.

ಈತ ಸೂಪರ್ ಮಾರ್ಕೆಟ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದಕ್ಕೆ ಗಾಬರಿಯಾಗಿಲ್ಲ. ರಾತ್ರಿಯಿಡೀ ಅಲ್ಲಿ ಎಂಜಾಯ್ ಮಾಡಿದ್ದಾನೆ. ಒಂದಾದ ಮೇಲೊಂದರಂತೆ ಬಿಯರ್ ಹೀರುತ್ತ ಕಾಲ ಕಳೆದಿದ್ದಾನೆ. ರಾತ್ರಿ 11.50ರ ವೇಳೆಗೆ ಈತ ಸಿಕ್ಕಿಹಾಕಿಕೊಂಡಿದ್ದ.

ಬಾಗಿಲ ಬಳಿ ಬಂದು ಸಹಾಯಕ್ಕಾಗಿ ಸೆಕ್ಯೂರಿಟಿಯನ್ನು ಕೂಗಲು ಅವಕಾಶವಿತ್ತು. ಆದ್ರೆ ಆತ ಹಾಗೆ ಮಾಡಲೇ ಇಲ್ಲ. ಬೆಳಗಿನ ಜಾವದವರೆಗೂ ಸುಮಾರು 18 ಬಾಟಲಿ ಬಿಯರ್ ಕುಡಿದಿದ್ದಾನೆ. ನಶೆಯೇರಿಸಿಕೊಂಡು ಹಾಗೇ ಮಲಗಿದ್ದ. ಬೆಳಗ್ಗೆ ಸೂಪರ್ ಮಾರ್ಕೆಟ್ ಬಾಗಿಲು ತೆರೆದ ಸಿಬ್ಬಂದಿ ಕುಡಿದು ಮಲಗಿದ್ದ ಆತನನ್ನು ಗಮನಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...