alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಗಮನ ಸೆಳೆಯುತ್ತಿದ್ದಾಳೆ 7 ತಿಂಗಳ ಪುಟ್ಟ ಬಾಲೆ…!

ಇಂದು ಚಿಕ್ಕ ವಯಸ್ಸಿಗೆ ಬಕ್ಕತಲೆಯ ಸಮಸ್ಯೆ, ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ತಿದೆ. ಕ್ಷೀಣಿಸುತ್ತಿರುವ ಕೂದಲನ್ನು ಉಳಿಸಿಕೊಳ್ಳೋಕೆ ಹಲವು ಪ್ರಯತ್ನಗಳನ್ನ ಜನರು ಮಾಡ್ತಾರೆ. ಆದ್ರೆ ಇಲ್ಲೊಂದು ಪುಟಾಣಿ ತನ್ನ ಸಹಜ ಕೂದಲಿನಿಂದ ಇಡೀ ವಿಶ್ವದ ಗಮನ ಸೆಳೆಯುತ್ತಿದ್ದಾಳೆ. ಇನ್ನೂ ಏಳು ತಿಂಗಳ ಪ್ರಾಯದ ಹಸುಗೂಸಿನ ಹೇರ್ ಸ್ಟೈಲ್ ಎಲ್ಲರಿಗೂ ಮೋಡಿ ಮಾಡ್ತಿದೆ.

2017 ರ ಡಿಸೆಂಬರ್ ನಲ್ಲಿ ಜನಿಸಿದ ಚಾಂಚೋ ಹೆಸರಿನ ಈ ಕೂಸು ದಟ್ಟ ಕೂದಲಿನಿಂದ ಇನ್ನಷ್ಟು ಕ್ಯೂಟ್ ಆಗಿ ಕಾಣಿಸ್ತಿದೆ. ದಿನಕ್ಕೊಂದು ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ತಿರೋ ಚಾಂಚೂ ಹುಟ್ಟಿದಾಗ್ಲೇ ತಲೆಯ ತುಂಬ ದಟ್ಟವಾದ ಕೂದಲಿತ್ತು. ಆನಂತರದಲ್ಲಿ ಆಕೆ ಬೆಳೆದ ಹಾಗೆಲ್ಲ ಪೋಷಕರಿಗೆ ಆಕೆಯ ಕೂದಲು ಸಾಮಾನ್ಯರ ಹಾಗಿಲ್ಲ ಅನ್ನಿಸೋಕೆ ಶುರುವಾಗಿದೆ.

ಆನಂತರದಲ್ಲಿ ಅವರು ದಿನಕ್ಕೊಂದು ಹೇರ್ ಸ್ಟೈಲ್ ಮಾಡಿ ಮಗು ಇನ್ನಷ್ಟು ಮುದ್ದಾಗಿ ಕಾಣುವಂತೆ ಮಾಡ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದ ತುಂಬೆಲ್ಲಾ ಚಾಂಚೂವಿನ ಮುದ್ದಾದ ಫೋಟೋಗಳು ಸುದ್ದಿ ಮಾಡ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...